ಶಿರಾಡಿ ಗ್ರಾಮದ ಮುಂಡಾಜೆ ಎಂಬಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಒಂದು ಮನೆಯ ಮೇಲೆಗೆ ಮರ ಬಿದ್ದು ಹಾನಿಯಾಗಿತ್ತು. ಈ ಘಟನೆ ಸಂಬಂಧಿಸಿದಂತೆ ಇಂದು ಮಾನ್ಯ ಶಾಸಕಿ ಭಾಗೀರಥಿ ಮೂರುಳ್ಯಅವರು ಸ್ಥಳಕ್ಕೆ ಭೇಟಿ ನೀಡಿ, ಸಂತ್ರಸ್ತ ಕುಟುಂಬದೊಂದಿಗೆ ಮಾತುಕತೆ ನಡೆಸಿದರು.
ಮಳೆಯಿಂದ ಮನೆಗೆ ಉಂಟಾದ ನಷ್ಟವನ್ನು ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಶಾಸಕರು, ಈಗಾಗಲೇ ಕಂದಾಯ ಇಲಾಖೆಯ ಮೂಲಕ ರೂ.1.25 ಲಕ್ಷ ಪರಿಹಾರವನ್ನು ಬಿಡುಗಡೆ ಮಾಡಲಾಗಿದೆ ಎಂಬುದನ್ನು ತಿಳಿಸಿದರು. ಜೊತೆಗೆ ಇನ್ನು ಹೆಚ್ಚಿನ ಪರಿಹಾರ ಒದಗಿಸುವ ಸಂಬಂಧವಾಗಿ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆಯನ್ನೂ ಸಂತ್ರಸ್ತರಿಗೆ ನೀಡಿದರು.
ಈ ಸಂದರ್ಭದಲ್ಲಿ ಭಾಸ್ಕರ ಇಚಲಂಪಾಡಿ, ಮಧುಸೂದನ್ ಕೊಂಬಾರು, ಕಿಶೋರ ಶಿರಾಡಿ, ಪ್ರಕಾಶ್ ಶಿರಾಡಿ, ಪಂಚಾಯತ್ ಸದಸ್ಯ ಲಕ್ಷ್ಮಣ ಹಾಗೂ ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು.
Post a Comment