ರೈತ ಯುವಕ ಮಂಡಲ ಏನೇಕಲ್ಲು ವತಿಯಿಂದ, ಏನೇಕಲ್ಲು ಪ್ರೌಢ ಶಾಲೆಯಲ್ಲಿ ಆಗಸ್ಟ್ 9, 2025ರಂದು ಸುಬ್ರಹ್ಮಣ್ಯ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಮಾದಕ ವಸ್ತುಗಳ ದುರುಪಯೋಗದ ಪರಿಣಾಮಗಳು, ಸೈಬರ್ ಅಪರಾಧಗಳ ಅಪಾಯಗಳು ಹಾಗೂ ಅವುಗಳನ್ನು ತಡೆಗಟ್ಟುವ ಮಾರ್ಗಗಳ ಕುರಿತು ಸುಬ್ರಹ್ಮಣ್ಯ ಪೊಲೀಸ್ ಇಲಾಖೆಯ ಸಹಾಯಕ ಉಪನಿರೀಕ್ಷಕ ಧನೇಶ್ ಎ. ಮತ್ತು ಬೀಟ್ ಪೊಲೀಸ್ ಪ್ರಮೀಳಾ ಜಾಗೃತಿ ಮೂಡಿಸಿದರು.
ಸಭಾಧ್ಯಕ್ಷತೆಯನ್ನು ರೈತ ಯುವಕ ಮಂಡಲ ಏನೇಕಲ್ಲು ಅಧ್ಯಕ್ಷ ಜೀವಿತ್ ಪರಮಲೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುಖ್ಯೋಪಾಧ್ಯಾಯ ರಮೇಶ್, ಸಹಶಿಕ್ಷಕಿ ಅನ್ನಪೂರ್ಣ ಭಟ್, ಪ್ರಶಾಂತ್ ದೋಣಿಮನೆ ಉಪಸ್ಥಿತರಿದ್ದರು.
ಜೀವಿತ್ ಪರಮಲೆ ಪ್ರಾಸ್ತಾವಿಕ ಹಾಗೂ ಸ್ವಾಗತ ಭಾಷಣ ಮಾಡಿದರು. ಕಾರ್ಯದರ್ಶಿ ಅಶೋಕ ಕುಮಾರ್ ಅಂಬೆಕಲ್ಲು ನಿರೂಪಣೆ ಹಾಗೂ ವಂದನೆ ಸಲ್ಲಿಸಿದರು.
Post a Comment