ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮಾದಕ ದ್ರವ್ಯ ಮುಕ್ತ ಮಂಗಳೂರು ಅಭಿಯಾನದಡಿ, ಆಗಸ್ಟ್ 8ರಂದು ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ 9 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಒಟ್ಟು ಸುಮಾರು 7 ಕಿಲೋ 519 ಗ್ರಾಂ ಗಾಂಜಾ ಮತ್ತು 219 ಗ್ರಾಂ ಬಾಂಗ್ ವಶಪಡಿಸಿಕೊಳ್ಳಲಾಗಿದೆ.
ಬಂಧಿತರ ವಿವರಗಳು:
ಕುದ್ರೋಳಿ ಖಂಡತ್‌ಪಳ್ಳಿ: ಅಬ್ದುಲ್ ಸಮದ್ @ ಚಮ್ಮು – 1.40 ಕೆ.ಜಿ ಗಾಂಜಾ
ಮುಲ್ಕಿ – ಕೊಲ್ನಾಡು ಲಿಂಗಪ್ಪಯ್ಯನಕಾಡು: ಧರ್ಮಲಿಂಗ – 1.90 ಕೆ.ಜಿ ಗಾಂಜಾ
ಬಜಪೆ – ಮರವೂರು: ಬಿಹಾರ ಮೂಲದ ದೋಲತ್ ಕುಮಾರ್ ಶರ್ಮಾ, ಮಹಮ್ಮದ್ ಖುಷಲಂ – 1.189 ಕೆ.ಜಿ ಗಾಂಜಾ ಮತ್ತು 219 ಗ್ರಾಂ ಬಾಂಗ್
ಕಂಕನಾಡಿ – ಪಡೀಲ್: ಕಾರ್ತಿಕ್, ಮೋಹಿತ್ – 800 ಗ್ರಾಂ ಗಾಂಜಾ
ಮಂಗಳೂರು ಪೂರ್ವ: ಕೇರಳ ಮೂಲದ ಪ್ರಣವ್ ಕೆ ವಿ – 1.100 ಕೆ.ಜಿ ಗಾಂಜಾ
ಪೊಲೀಸರ ಪ್ರಕಾರ, ಆರೋಪಿಗಳು ಕಾಲೇಜು ವಿದ್ಯಾರ್ಥಿಗಳು, ಯುವಕರು ಮತ್ತು ಸಾರ್ವಜನಿಕರಿಗೆ ನಿರಂತರವಾಗಿ ಗಾಂಜಾ ಮಾರಾಟ ಮಾಡುತ್ತಿದ್ದರು. ಬಂಧಿತರಿಂದ ಗಾಂಜಾವನ್ನು ಪೂರೈಸುತ್ತಿದ್ದ ಇತರ ಮೂಲಗಳ ಮಾಹಿತಿ ಸಹ ಲಭ್ಯವಾಗಿದ್ದು, ಖರೀದಿದಾರರ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತರು ಸಾರ್ವಜನಿಕರನ್ನು ಮಾದಕ ವಸ್ತು ಬಳಕೆ ಮತ್ತು ವ್ಯಾಪಾರ ಕುರಿತು ಎಚ್ಚರಿಕೆ ನೀಡುತ್ತಾ, ಮಾಹಿತಿ ದೊರೆತ ತಕ್ಷಣ ಪೊಲೀಸರಿಗೆ ತಿಳಿಸಲು ವಿನಂತಿಸಿದ್ದಾರೆ.
Post a Comment