ನೂಜಿಬಾಳ್ತಿಲ ಬೆಥನಿ ಸಂಯುಕ್ತ ಪ.ಪೂ. ಮಹಾವಿದ್ಯಾಲಯದಲ್ಲಿ ಆಟಿ ಆಚರಣೆ.

ನೂಜಿಬಾಳ್ತಿಲ: ನೂಜಿಬಾಳ್ತಿಲ ಬೆಥನಿ ಸಂಯುಕ್ತ ಪ.ಪೂ. ಮಹಾವಿದ್ಯಾಲಯದಲ್ಲಿ ಆಗಸ್ಟ್ 9 ಶನಿವಾರ ಆಟಿ ತಿಂಗಳ ಸಂಭ್ರಮದ ಕಾರ್ಯಕ್ರಮ ಜರಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಶ್ರೀ ಲಕ್ಷ್ಮಣ ಗೌಡ ಬಿಳಿನೆಲೆ ನೆರವೇರಿಸಿದರು. ನಂತರ, ಸಂಸ್ಥೆಯ ಉಪನ್ಯಾಸಕ ಶ್ರೀ ವಿಶ್ವನಾಥ ಶೆಟ್ಟಿ ಅವರು ಆಟಿ ತಿಂಗಳ ಮಹತ್ವ, ತುಳುನಾಡಿನ ಸಂಸ್ಕೃತಿ, ತುಳುಭಾಷೆಯ ಸಂರಕ್ಷಣೆ ಮತ್ತು ಆಚಾರ-ವಿಚಾರಗಳ ಬಗ್ಗೆ ಮನನೀಯ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳಿಗೆ ಸ್ಥಳೀಯ ಸಂಸ್ಕೃತಿ ಪರಿಚಯಿಸುವ ಜವಾಬ್ದಾರಿಯನ್ನು ವಿದ್ಯಾಸಂಸ್ಥೆಗಳು ಹೊತ್ತಿರಬೇಕೆಂದು ಅವರು ಒತ್ತಿ ಹೇಳಿದರು.

ವಿದ್ಯಾರ್ಥಿನಿ ಜಸ್ಮಿತಾ ದಿನಾಚರಣೆ ಕುರಿತು ಭಾಷಣ ಮಾಡಿದರು. ಸಮೂಹಗಾನ, ಸಮೂಹನೃತ್ಯ, ತುಳುನಾಡ ಸಂಸ್ಕೃತಿಯನ್ನು ಬಿಂಬಿಸುವ ರೂಪಕ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿದ್ಯಾರ್ಥಿಗಳು ತಮಗೆ ತಾವೇ ತಯಾರಿಸಿದ ಆಟಿ ತಿಂಗಳ ವಿಶೇಷ ಖಾದ್ಯಗಳನ್ನು ತಂದು ಪರಸ್ಪರ ಹಂಚಿಕೊಂಡು ಸಹಭೋಜನದಲ್ಲಿ ಭಾಗವಹಿಸಿದರು.

ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಕು. ಶ್ರುತಿ ನಿರೂಪಿಸಿದರು. ಕು. ದೀಪ್ತಿ ವಂದಿಸಿದರು. ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷೆ ಶ್ರೀಮತಿ ಭಾರತಿ, ಸಂಘದ ಎಲ್ಲಾ ಪದಾಧಿಕಾರಿಗಳು, ಶಾಲಾ ಮುಖ್ಯಗುರು ತೋಮಸ್ ಏ.ಕೆ., ಉಪನ್ಯಾಸಕರು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ, ಪೋಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಾಲಾ ಪ್ರಾಂಶುಪಾಲ ಜಾರ್ಜ್ ಟಿ.ಎಸ್. ರವರು ಅತಿಥಿಗಳನ್ನು ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನು ನೀಡಿದರು.

Post a Comment

Previous Post Next Post