ಖೋಟಾ ನೋಟು ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ವಾರಂಟ್‌ ಆಸಾಮಿ ಬಂಧನ 🚨

ಬಂಟ್ವಾಳ/ಉಪ್ಪಿನಂಗಡಿ: ಖೋಟಾ ನೋಟು ಪ್ರಕರಣ ಸೇರಿದಂತೆ ಅನೇಕ ಗಂಭೀರ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ನಿಜಾಮುದ್ದೀನ್ ಅಲಿಯಾಸ್ ನಿಜಾಮ್ (33) ಎಂಬಾತನನ್ನು ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಅಪರಾಧ ವಿಭಾಗ ಹಾಗೂ ವಾರಂಟ್ ಜ್ಯಾರಿ ಸಿಬ್ಬಂದಿಗಳು ಬಂಧಿಸಿದ್ದಾರೆ.

ಆರೋಪಿ ವಿವರ:
ಹೆಸರು: ನಿಜಾಮುದ್ದೀನ್ ಅಲಿಯಾಸ್ ನಿಜಾಮ್ (33)
ತಂದೆ: ಮೊಹಮ್ಮದ್ ಕೆ.ಎ

ಶಾಶ್ವತ ವಿಳಾಸ: ನಿಜಾಮ್ ಮಂಝಿಲ್, ತಲಪಾಡಿ ಹೌಸ್, ಜೋಡುಮಾರ್ಗ, ಬಿ.ಸಿ.ರೋಡ್, ಬಂಟ್ವಾಳ.
ಹಾಲಿ ವಾಸ: ದಾವೂದ್ ಅವರ ಬಾಡಿಗೆ ಮನೆ, ಒಳಲು ಅಂಚೆ, ಬಜತೂರು ಮದರಸ ಹತ್ತಿರ.


ಪ್ರಕರಣದ ಹಿನ್ನೆಲೆ
2023ರಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಅ.ಕ್ರ 01/2023 ಅಡಿ ಖೋಟಾ ನೋಟು ಪ್ರಕರಣ (IPC ಸೆಕ್ಷನ್ 489(B), 489(C) r/w 34) ದಾಖಲಾಗಿ, ಆರೋಪಿ ನ್ಯಾಯಾಲಯದಿಂದ ಜಾಮೀನು ಪಡೆದು ನಂತರ ಹಾಜರಾಗದೇ ತಲೆಮರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಲಯವು ಅವನ ವಿರುದ್ಧ 8 ಬಾರಿ ಬಂಧನ ವಾರಂಟ್ ಹೊರಡಿಸಿತ್ತು.

ದಿನಾಂಕ 25-08-2025 ರಂದು ಉಪ್ಪಿನಂಗಡಿ ಬಳಿಯ ವಲಾಲು ಪ್ರದೇಶದಲ್ಲಿ ಖಚಿತ ಮಾಹಿತಿ ಮೇರೆಗೆ ದಸ್ತಗಿರಿ ಮಾಡಲಾಗಿದ್ದು, ಜಾಮೀನು ಷರತ್ತುಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ BNS-2023 ಕಲಂ 269 ಅಡಿಯಲ್ಲಿ ಕ್ರಮ ಕೈಗೊಂಡು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

---
ನಿಜಾಮುದ್ದೀನ್ ವಿರುದ್ಧ ದಾಖಲಾಗಿರುವ ಪ್ರಮುಖ ಪ್ರಕರಣಗಳು 👇

1. ಮಂಗಳೂರು ಪೂರ್ವ ಪೊಲೀಸ್ ಠಾಣೆ – ಅ.ಕ್ರ 1/2023 – 489(A)(B)(C), r/w 34 IPC (ವಾರಂಟ್ ಬಾಕಿ)

2. ಮಂಗಳೂರು ದಕ್ಷಿಣ ಪೊಲೀಸ್ ಠಾಣೆ – ಅ.ಕ್ರ 128/2022 – 392, 506 r/w 34 IPC (ವಾರಂಟ್ ಬಾಕಿ)

3. ಮಡಿವಾಳ ಪೊಲೀಸ್ ಠಾಣೆ – ಅ.ಕ್ರ 235/2022 – 489(A)(B), 420 r/w 34 IPC (ಉದ್ಘೋಷಣೆ ಬಾಕಿ)

4. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ – ಅ.ಕ್ರ 147/2016 – 398, 402 IPC (ವಿಚಾರಣೆಯಲ್ಲಿದೆ)

5. ಮಂಗಳೂರು ಬರ್ಕೆ ಪೊಲೀಸ್ ಠಾಣೆ – ಅ.ಕ್ರ 93/2015 – 143, 323, 324, 353, 427, 302 r/w 149 IPC (ವಿಚಾರಣೆಯಲ್ಲಿದೆ)

6. ಪುತ್ತೂರು ನಗರ ಪೊಲೀಸ್ ಠಾಣೆ – ಅ.ಕ್ರ 112/2017 – 120(B), 341, 323, 307, 427 r/w 34 IPC (ವಿಚಾರಣೆಯಲ್ಲಿದೆ)

7. ವಿಟ್ಲ ಪೊಲೀಸ್ ಠಾಣೆ – ಅ.ಕ್ರ 181/2015 – 143, 147, 148, 341, 324, 307, 302, 120(B) IPC (ಖುಲಾಸೆಗೊಂಡಿದೆ)


Post a Comment

Previous Post Next Post