ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಬೃಹತ್ ಉಚಿತ ವೈದ್ಯಕೀಯ ಶಿಬಿರ – ಸಾಧಕರಿಗೆ ಸನ್ಮಾನ

ಸುಬ್ರಹ್ಮಣ್ಯ, ಸೆಪ್ಟೆಂಬರ್ 7:ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನೂರಾರು ಭಕ್ತರು, ಸ್ಥಳೀಯರು ಹಾಗೂ ಗ್ರಾಮೀಣ ಪ್ರದೇಶದ ಜನತೆಗೆ ಆರೋಗ್ಯಸೇವೆಯನ್ನು ತಲುಪಿಸುವ ಉದ್ದೇಶದಿಂದ ಡಾ. ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ಅವರ ನೇತೃತ್ವದಲ್ಲಿ, ಕೆ.ವಿ.ಜಿ. ವೈದ್ಯಕೀಯ ಆಸ್ಪತ್ರೆ ಮತ್ತು ಮಹಾವಿದ್ಯಾಲಯ ಸುಳ್ಯ ಇವರ ಸಹಕಾರದಲ್ಲಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಬೃಹತ್ ಉಚಿತ ವೈದ್ಯಕೀಯ ಶಿಬಿರ ಸೆಪ್ಟೆಂಬರ್ 7ರಂದು ನಡೆಯಲಿದೆ.
ಕಾರ್ಯಕ್ರಮದ ವೈಶಿಷ್ಟ್ಯಗಳು
ಶಿಬಿರವನ್ನು ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳು ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮಕ್ಕೆ ಟ್ರಸ್ಟ್ ಸಂಸ್ಥಾಪಕ ಡಾ. ರವಿ ಕಕ್ಕೆಪದವು ಅಧ್ಯಕ್ಷತೆ ವಹಿಸಲಿದ್ದಾರೆ.

ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ ಕಲ್ಲಾಜೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಪತ್ರಿಕಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಸಂಪಾದಕ ಹರೀಶ್ ಬಂಟ್ವಾಳ್ ಹಾಗೂ ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಇವರಿಗೆ ಈ ಸಂದರ್ಭದಲ್ಲಿ ಸನ್ಮಾನ ಸಲ್ಲಿಸಲಾಗುವುದು.


ಶಿಬಿರದಲ್ಲಿ ಲಭ್ಯವಿರುವ ಪ್ರಮುಖ ಚಿಕಿತ್ಸೆಗಳು

ಸಾಮಾನ್ಯ ಕಾಯಿಲೆಗಳು: ಶೀತ, ಜ್ವರ, ಕೆಮ್ಮು, ಉಸಿರಾಟದ ತೊಂದರೆ, ರಕ್ತದೊತ್ತಡ, ಸಕ್ಕರೆ ಕಾಯಿಲೆ, ರಕ್ತಹೀನತೆ.

ಶಸ್ತ್ರಚಿಕಿತ್ಸೆ ಸಂಬಂಧಿತ ಸಮಸ್ಯೆಗಳು: ಹಾರ್ನಿಯಾ, ಅಪೆಂಡಿಕ್ಸ್, ಪಿತ್ತಕೋಶ ತೊಂದರೆ, ಕಿಡ್ನಿ ಸ್ಟೋನ್, ಮೂಲವ್ಯಾಧಿ.

ಮಹಿಳಾ ಮತ್ತು ಮಕ್ಕಳ ವಿಭಾಗ: ಮಕ್ಕಳ ಅಪೌಷ್ಟಿಕತೆ, ಗರ್ಭಿಣಿಯರ ಆರೋಗ್ಯ ತಪಾಸಣೆ, ಗರ್ಭಕೋಶ ಸಂಬಂಧಿತ ಕಾಯಿಲೆಗಳು, ಬಂಜೆತನ ಸಮಸ್ಯೆ.

ವಿಶೇಷ ತಪಾಸಣೆಗಳು: ಥೈರಾಯ್ಡ್ ತಪಾಸಣೆ, ಕಿವಿ ಕಾಯಿಲೆಗಳು, ಕಣ್ಣಿನ ಪೊರೆ ಮತ್ತು ದೃಷ್ಟಿ ಸಮಸ್ಯೆಗಳು, ಕಜ್ಜಿ ತುರಿಕೆ.

ಎಲುಬು ಮತ್ತು ಕೀಲು ವಿಭಾಗ: ಎಲುಬು-ಕೀಲು ನೋವು, ಶ್ವಾಸಕೋಶದ ತೊಂದರೆಗಳಿಗೆ ತಜ್ಞರ ಸಲಹೆ.

ತುರ್ತು ಚಿಕಿತ್ಸಾ ಸೇವೆಗಳು: ಉಚಿತ ಇಸಿ.ಜಿ. ತಪಾಸಣೆ, ತುರ್ತು ಚಿಕಿತ್ಸಾ ವಿಭಾಗ, ನವೀನ ವೈದ್ಯಕೀಯ ಸೌಲಭ್ಯ.


ಶಿಬಿರದ ಉದ್ದೇಶ;
ಗ್ರಾಮೀಣ ಹಾಗೂ ಹಳ್ಳಿಹಳ್ಳಿಗಳಲ್ಲಿ ಆರೋಗ್ಯ ಸೇವೆ ತಲುಪಿಸಲು, ಸಾಮಾನ್ಯ ಜನರಿಗೆ ಉಚಿತ ವೈದ್ಯಕೀಯ ನೆರವು ಒದಗಿಸಲು ಹಾಗೂ ತಜ್ಞ ವೈದ್ಯರನ್ನು ನೇರ ಸಂಪರ್ಕಿಸುವ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ.

ಈ ಶಿಬಿರದಲ್ಲಿ ಕೆ.ವಿ.ಜಿ. ವೈದ್ಯಕೀಯ ಕಾಲೇಜಿನ ತಜ್ಞ ವೈದ್ಯರು, ನರ್ಸ್‌ಗಳು ಹಾಗೂ ತಾಂತ್ರಿಕ ಸಿಬ್ಬಂದಿ ತಮ್ಮ ಸೇವೆಯನ್ನು ನೀಡಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಶಿಬಿರದಿಂದ ಲಾಭ ಪಡೆಯುವ ನಿರೀಕ್ಷೆಯಿದೆ.

ಸ್ಥಳ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳ ತಾತ್ಕಾಲಿಕ ಧರ್ಮಸಮ್ಮೇಳನ ಮಂಟಪ
ದಿನಾಂಕ: ಸೆಪ್ಟೆಂಬರ್ 7, ಭಾನುವಾರ
ಸಮಯ: ಬೆಳಗ್ಗೆ 9.30ರಿಂದ

Post a Comment

Previous Post Next Post