ತಮಿಳುನಾಡಿನ ಮೈಲಾಡುತುರೈ ಜಿಲ್ಲೆಯ ಸಿರ್ಕಾಲಿಯಲ್ಲಿ ಜೂನ್ 21, 2025ರಂದು ನಡೆದ 1ನೇ ಅಖಿಲ ಭಾರತ ಯೋಗ ಚಾಂಪಿಯನ್‌ಶಿಪ್ 2025ರಲ್ಲಿ ಕರ್ನಾಟಕದ ಪ್ರತಿಭಾವಂತ ಬಾಲಕಿ ಗೌರಿತಾ ಕೆ.ಜಿ. ಅವರು ಉನ್ನತ ಸಾಧನೆ ಮಾಡಿದ್ದಾರೆ.
12 ವರ್ಷಕ್ಕಿಂತ ಕಡಿಮೆ ವಯೋಮಾನದ ಗುಂಪಿನಲ್ಲಿ –
ಸಾಮಾನ್ಯ ವಿಭಾಗದಲ್ಲಿ ದ್ವಿತೀಯ ಸ್ಥಾನ
ವಿಶೇಷ ವಿಭಾಗದಲ್ಲಿ ಪ್ರಥಮ ಸ್ಥಾನ
ಅರ್ಜಿಸಿಕೊಂಡು ತನ್ನ ಅದ್ಭುತ ಪ್ರತಿಭೆಯನ್ನು ಮೆರೆದಿದ್ದಾರೆ.
ಗೌರಿತಾ ಅವರ ಸಾಧನೆಯನ್ನು ಗುರುತಿಸಿ ಆಯೋಜಕರು “ವಿನ್ನರ್” ಬಿರುದನ್ನು ನೀಡಿ ಗೌರವಿಸಿದ್ದಾರೆ.
ಅವರು ಡಾ. ಗೌತಮ್ ಹಾಗೂ ಡಾ. ರಾಜೇಶ್ವರಿ ದಂಪತಿ ಪುತ್ರಿಯಾಗಿದ್ದು, ಪ್ರಸಿದ್ಧ ಯೋಗಗುರು ಶರತ್ ಮರ್ಗಿಲಡ್ಕ ಅವರ ಶಿಷ್ಯೆಯಾಗಿದ್ದಾರೆ.
ಈ ಸಾಧನೆಯಿಂದ ಗೌರಿತಾ ತಮ್ಮ ಕುಟುಂಬ, ಗುರುಗಳು ಹಾಗೂ ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ.
Post a Comment