ಯೋಗ ಪಟು ಗೌರಿತಾಳಿಗೆ "ಕರುನಾಡ ತಾರೆ" ರಾಜ್ಯ ಪ್ರಶಸ್ತಿ ಗೌರವ.

ಹುಬ್ಬಳ್ಳಿ:ಯೋಗ ಕ್ಷೇತ್ರದಲ್ಲಿ ತನ್ನ ಸತತ ಸಾಧನೆಗಳಿಂದ ಹೆಸರು ಮಾಡಿರುವ ಗೌರಿತಾ ಕೆ.ಜಿ. ಅವರಿಗೆ ಪ್ರತಿಷ್ಠಿತ "ಕರುನಾಡ ತಾರೆ ರಾಜ್ಯ ಪ್ರಶಸ್ತಿ" ಪ್ರದಾನ ಮಾಡಲಾಯಿತು.

ಶ್ರೀ ಸರ್ವೇಜನಾ ಆರ್ಟ್ ಮತ್ತು ಕಲ್ಚರಲ್ ಟ್ರಸ್ಟ್ (ರಿ), ನಾಗರಬಾವಿ – ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಭಾಗಿತ್ವದಲ್ಲಿ ಆಗಸ್ಟ್ 31, 2025ರಂದು ಹುಬ್ಬಳ್ಳಿಯ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ವಿಜೃಂಭಣೆಯಿಂದ ಈ ಕಾರ್ಯಕ್ರಮ ನೆರವೇರಿತು.

ಗೌರಿತಾ ಇದುವರೆಗೆ ಸಾಧಿಸಿದ 15ಕ್ಕೂ ಹೆಚ್ಚು ಯೋಗ ದಾಖಲೆಗಳನ್ನು ಪರಿಶೀಲಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಗಣ್ಯರಾದ –
ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳು (ನಿರಂತರ ದಾಸೋಹ ಮಠ ಮತ್ತು ಕಲಾ ಪೋಷಕರ ಮಠ ಧರ್ಮಾಧಿಕಾರಿ, ಸುಕ್ಷೇತ್ರ ಸಿದ್ದನ ಕೊಳ್ಳ),

ಪರಮಪೂಜ್ಯ ಡಾ. ಮೋಹನ್ ಗುರು ಸ್ವಾಮಿಗಳು (ಹುಬ್ಬಳ್ಳಿ),

ಶ್ರೀ ವಿಜಯಕುಮಾರ್ (ಕರ್ನಾಟಕ ಬಲಂ – ಕೆಚ್ಚೆದೆಯ ಕನ್ನಡಿಗರ ಸೇವೆ ರಾಜ್ಯಾಧ್ಯಕ್ಷರು, ಬೆಂಗಳೂರು),

ಶ್ರೀಮತಿ ಮಾಲತಿ ಸುಧೀರ್ (ಅಧ್ಯಕ್ಷರು [ಮಾಜಿ], ಕರ್ನಾಟಕ ನಾಟಕ ಅಕಾಡೆಮಿ – ರಂಗಭೂಮಿ, ಚಲನಚಿತ್ರ, ಕಿರುತೆರೆ ನಟಿ/ನಿರ್ದೇಶಕಿ/ನಿರ್ಮಾಪಕಿ),

ಶ್ರೀ ಶಿವಕುಮಾರ್ ಆರಾಧ್ಯ (ಉಪಾಧ್ಯಕ್ಷರು, ಚಲನಚಿತ್ರ ಹಾಗೂ ಕಿರುತೆರೆ ಕಲಾವಿದರು),

ಡಾ. ಕೆಂಚನೂರು ಶಂಕರ (ಗೌರವಾಧ್ಯಕ್ಷರು, ಪತ್ರಕರ್ತ, ಸಾಹಿತಿ, ಲೇಖಕ, ನಟ, ನಿರ್ದೇಶಕ),

ಲಕ್ಷಿತಾ ಗಂಗಾವತಿ (ಸ್ಥಾಪಕರು, ಚಲನಚಿತ್ರ ಮತ್ತು ಕಿರುತೆರೆ ನಟಿ)


ಹಾಗೂ ಅನೇಕ ಗಣ್ಯರು ಹಾಜರಿದ್ದರು.
ಈ ಸಂದರ್ಭದಲ್ಲಿ ಗೌರಿತಾ ತನ್ನ ವೈಶಿಷ್ಟ್ಯಮಯ ಯೋಗ ನೃತ್ಯ ಪ್ರದರ್ಶನ ನೀಡಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು.

ಕುಮಾರಸ್ವಾಮಿ ಇಂಗ್ಲಿಷ್ ಮೀಡಿಯಂ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿಯಾದ ಗೌರಿತಾ, ಡಾ. ಗೌತಮ್ ಹಾಗೂ ಡಾ. ರಾಜೇಶ್ವರಿ ದಂಪತಿಯ ಪುತ್ರಿ.

🌟 ತನ್ನ ಬಾಲವಯಸ್ಸಿನಲ್ಲೇ ಯೋಗ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿರುವ ಗೌರಿತಾಳಿಗೆ ಈ ಗೌರವ ರಾಜ್ಯಮಟ್ಟದಲ್ಲಿ ಮತ್ತಷ್ಟು ಪ್ರೇರಣೆ ನೀಡಿದೆ.

Post a Comment

Previous Post Next Post