ಉಪ್ಪಿನಂಗಡಿ: 12 ವರ್ಷಗಳಿಂದ ಪೊಲೀಸರ ಕಣ್ಗಳಿಂದ ತಪ್ಪಿಸಿಕೊಂಡಿದ್ದ ಆರೋಪಿಯೊಬ್ಬನು ಕೊನೆಗೂ ಕಾನೂನಿನ ಬಲೆಗೆ ಸಿಕ್ಕಿದ್ದಾನೆ.
ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ ಸಂಖ್ಯೆ 140/2013ರ ಅಡಿಯಲ್ಲಿ ಭಾರತೀಯ ದಂಡ ಸಂಹಿತೆಯ 354(ಎ), (ಡಿ) ಸೆಕ್ಷನ್ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಆರೋಪಿಯಾಗಿದ್ದ ಇಮ್ರಾನ್ ಖಾನ್ (36), ಶಿವಾಜಿನಗರ, ಬೆಂಗಳೂರು ಎಂಬಾತನು ದೀರ್ಘಕಾಲದಿಂದ ತಲೆಮರೆಸಿಕೊಂಡಿದ್ದನು.
ಈ ಪ್ರಕರಣದಲ್ಲಿ ಆರೋಪಿಯ ವಿರುದ್ಧ ಮಾನ್ಯ ನ್ಯಾಯಾಲಯವು LPC ವಾರೆಂಟ್ ಸಂಖ್ಯೆ 1/2024 ರಂತೆ ವಾರೆಂಟ್ ಹೊರಡಿಸಿತ್ತು.
ಇದೀಗ, ಉಪ್ಪಿನಂಗಡಿ ಪೊಲೀಸ್ ತಂಡವು ನಿಖರವಾದ ಮಾಹಿತಿ ಆಧಾರದಲ್ಲಿ, ಬೆಂಗಳೂರು ನಗರದ ಕೆ.ಜಿ ಹಳ್ಳಿ ಪ್ರದೇಶದಿಂದ 13-09-2025ರಂದು ಆರೋಪಿಯನ್ನು ಬಂಧಿಸಲು ಯಶಸ್ವಿಯಾಯಿತು.
ಬಂಧಿತನನ್ನು 14-09-2025 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಪೊಲೀಸ್ ಇಲಾಖೆಯ ಈ ಕಾರ್ಯಾಚರಣೆಯಿಂದ 12 ವರ್ಷಗಳಿಂದ ಮುಚ್ಚಿದಂತಿದ್ದ ಪ್ರಕರಣಕ್ಕೆ ಅಂತ್ಯಕಾಣಿಸಿದೆ.
إرسال تعليق