ಉಪ್ಪಿನಂಗಡಿ:ಸಾಂಪ್ರದಾಯಿಕ ಬೇರುಗಳು ನಾವಿನ್ಯತೆಯ* *ರೆಕ್ಕೆಗಳು* ಎಂಬ ಧ್ಯೇಯವಾಕ್ಯದೊಂದಿಗೆ ಇಂದ್ರಪ್ರಸ್ಥ ಪದವಿಪೂರ್ವ ಕಾಲೇಜಿನಲ್ಲಿ ‘ *ಬಯೋನಿಕಾ–2025’* ಸಾಂಪ್ರದಾಯಿಕ ಆಯುರ್ವೇದ ಔಷಧೀಯ ಯೋಜನಾ ಕಾರ್ಯಕ್ರಮದಡಿ ಪಾರಂಪರಿಕ ಔಷಧಗಳನ್ನು ಪರಿಚಯಿಸಲಾಯಿತು.
ಕಾರ್ಯಕ್ರಮದಲ್ಲಿ 30ಕ್ಕೂ ಹೆಚ್ಚು ಮಿಕ್ಕಿದ ನಾಟಿ ಪರಂಪರೆಯಲ್ಲಿ ಬಳಕೆಯಲ್ಲಿದ್ದ ಔಷದಗಳನ್ನು ಅನಾವರಣಗೊಳಿಸಲಾಗಿದ್ದು, ಔಷಧಗಳ ತಯಾರಿ ಬಳಕೆ ಮತ್ತು ಪರಿಣಾಮಗಳನ್ನು ವಿದ್ಯಾರ್ಥಿಗಳು ನಿಖರವಾಗಿ ವಿವರಿಸುವ ಮೂಲಕ ಪರಿಸರದೊಳಗಿನ ಆರೋಗ್ಯ ವರ್ಧಕ ಸಸ್ಯಗಳ ಮಾಹಿತಿ ನೀಡಿದರು.ಉದ್ದೇಶ ಹಾಗೂ ಪ್ರಾಯೋಗಿಕ ಪ್ರಯೋಗಗಳನ್ನು ವಿದ್ಯಾರ್ಥಿಗಳು ಮನೋಜ್ಞವಾಗಿ ಪ್ರಸ್ತುತಪಡಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ.ಸುಪ್ರೀತ್ ಲೋಬೊ “ವಿಜ್ಞಾನೋತ್ಸವಗಳು ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವ ಬೆಳೆಸಲು ಸಹಕಾರಿ” ಎಂದು ತಿಳಿಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕಿ ಡಾ. ಸುಧಾ ಎಸ್.ರಾವ್ ಸಭಾಧ್ಯಕ್ಷ ತೆ ವಹಿಸಿದ್ದರು ಇಂದ್ರಪ್ರಸ್ಥ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಕರುಣಾಕರ ಸುವರ್ಣ, ಪ್ರಾಂಶುಪಾಲ ಎಚ್.ಕೆ. ಪ್ರಕಾಶ್, ಆಡಳಿತ ಮಂಡಳಿಯ ಸದಸ್ಯರಾದ ರಾಜೇಶ್ ಪೈ, ವಂದನಾ,ಸುಧಾಕರ ಶೆಟ್ಟಿ. ಇಂದ್ರಪ್ರಸ್ಥ ವಿದ್ಯಾಲಯದ ಮುಖ್ಯ ಗುರು ವೀಣಾ ಆರ್.ಪ್ರಸಾದ್ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ಶ್ರೀರಾಮ ಶಾಲಾ ಸಂಚಾಲಕರಾದ ಯು.ಜಿ.ರಾಧಾ ಇಂದ್ರಪ್ರಸ್ಥವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಜಯಪ್ರಸಾದ್ ಕಡಮಾಜೆ ಉಪಸ್ಥಿತರಿದ್ದರು.ಉಪನ್ಯಾಸಕಿ ಸೌಮ್ಯ ಸ್ವಾಗತಿಸಿ,ಉಪನ್ಯಾಸಕಿ ಆಜ್ಞಾ ಆರ್.ಎ.ಜೈನ್ ವಂದಿಸಿದರು. ಉಪನ್ಯಾಸಕಿ ಸ್ವಾತಿ ಬಿ.ಎಸ್ ನಿರೂಪಿಸಿದರು.
إرسال تعليق