ಇಚಿಲಂಪಾಡಿ:ಇಚಿಲಂಪಾಡಿ ಬಿಲ್ಲವ ಸಂಘದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜಯಂತಿ ಕಾರ್ಯಕ್ರಮವನ್ನು ಭಾವಪೂರ್ಣವಾಗಿ ಆಚರಿಸಲಾಯಿತು. ಜಯಂತಿಯ ಅಂಗವಾಗಿ ನೆರ್ಲ ಸರಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸಿಹಿ ವಿತರಣೆ ಮಾಡುವ ಮೂಲಕ ಸಮಾಜಸೇವಾ ಚಟುವಟಿಕೆಯನ್ನು ಸಂಘವು ನಡೆಸಿತು.
ಈ ಸಂದರ್ಭದಲ್ಲಿ ಇಚಿಲಂಪಾಡಿ ಬಿಲ್ಲವ ಸಂಘದ ಗೌರವಾಧ್ಯಕ್ಷರಾದ ಇಂದ್ರ ಪೂಜಾರಿ ಬದನೆ ಅವರು ಮಾತನಾಡಿ,
"ಸಾಮಾಜಿಕ ಸುಧಾರಕ, ತತ್ವಜ್ಞಾನಿ ಹಾಗೂ ವಿಶ್ವಮಾನವತಾವಾದಿ ಆದ ಬ್ರಹ್ಮಶ್ರೀ ನಾರಾಯಣ ಗುರು ಅವರ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ. ಅವರ ಆದರ್ಶಗಳನ್ನು ಮಕ್ಕಳಿಗೆ ಪರಿಚಯಿಸಿ ಸಮಾಜದಲ್ಲಿ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಕರ್ತವ್ಯ" ಎಂದು ಹೇಳಿದರು.
ಬಿಲ್ಲವ ಸಂಘದ ಅಧ್ಯಕ್ಷ ಗಿರೀಶ್ ಸಾಲ್ಲ್ಯಾನ್, ಉಪಾಧ್ಯಕ್ಷ ಹರೀಶ್ ಚಂದ್ರ, ಗ್ರಾಮದ ಪ್ರಮುಖರಾದ ಉದಯ ಕುಮಾರ್ ಹೊಸಮನೆ, ಎಸ್.ಡಿ.ಎಂ.ಸಿ. ಸದಸ್ಯರು ಹಾಗೂ ಶಾಲೆಯ ಶಿಕ್ಷಕರು ಈ ಸಂದರ್ಭದಲ್ಲಿ ಹಾಜರಿದ್ದರು.
ಶಾಲಾ ಮಕ್ಕಳಿಗೆ ಸಿಹಿ ವಿತರಣೆ ಮಾಡುವ ಮೂಲಕ ಮಕ್ಕಳಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಯಿತು. ಕಾರ್ಯಕ್ರಮವನ್ನು ಬಿಲ್ಲವ ಸಂಘದ ಸದಸ್ಯರು ಯಶಸ್ವಿಯಾಗಿ ನೆರವೇರಿಸಿದರು.
إرسال تعليق