ಪುತ್ತೂರು ತಾಲೂಕು ಇರ್ದೆ ಗ್ರಾಮದ ನಿರ್ದೇಶನ ಮೂರ್ತಿ ದೇವಸ್ಥಾನದಲ್ಲಿ 2021ರ ಏಪ್ರಿಲ್ 23ರ ರಾತ್ರಿ ಸಂಭವಿಸಿದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ 32/2021, ಕಲಂ 454, 457, 380 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ತನಿಖೆ ನಡೆಸಿದ ಪೋಲೀಸ್ ಉಪನಿರೀಕ್ಷಕರಾದ ಉದಯ ರವಿ ಅವರು ಸಾಕ್ಷಾಧಾರಗಳನ್ನು ಸಂಗ್ರಹಿಸಿ ಮಾನ್ಯ ಎಎಸ್‌ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ, ಪುತ್ತೂರು ಅವರಿಗೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣ ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಧೀಶ ಶ್ರೀ ದೇವರಾಜ್ ವೈ.ಹೆಚ್. ಅವರು 2025ರ ಆಗಸ್ಟ್ 29ರಂದು ತೀರ್ಪು ನೀಡಿದ್ದು, ಆರೋಪಿ ವಿರುದ್ಧ ಮೂರು ವರ್ಷಗಳ ಸಜೆ ಹಾಗೂ ₹10,000 ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ವಿಫಲವಾದಲ್ಲಿ, ಆರೋಪಿ ಇನ್ನೂ ಆರು ತಿಂಗಳುಗಳ ಸದಾ ಕಾರಾಗೃಹ ಶಿಕ್ಷೆ ಅನುಭವಿಸಬೇಕಾಗುತ್ತದೆ.
ಈ ಪ್ರಕರಣದಲ್ಲಿ ಸರ್ಕಾರಿ ಸಹಾಯಕ ಅಭಿಯೋಜಕರಾಗಿ ಚೇತನಾ ದೇವಿ ವಾದ ಮಂಡಿಸಿದ್ದು, ಹೆಡ್ ಕಾನ್ಸ್ಟೇಬಲ್ ದೇವರಾಜ್ ಕೆ. (HC 2025) ತನಿಖಾ ಸಹಾಯಕರಾಗಿ ಹಾಗೂ ಪೋಲೀಸ್ ಕಾನ್ಸ್ಟೇಬಲ್ ಮಾರುತಿ (PC 2399) ನ್ಯಾಯಾಲಯ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
Post a Comment