ನೆಲ್ಯಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ₹4.30 ಲಕ್ಷ ಲಾಭ.

ನೆಲ್ಯಾಡಿ:ನೆಲ್ಯಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಸೆಪ್ಟೆಂಬರ್ 18ರಂದು ಸಂಘದ ಸಭಾಂಗಣದಲ್ಲಿ ನಡೆಯಿತು.

ಸಂಘವು ಒಟ್ಟು 308 ಸದಸ್ಯರನ್ನು ಹೊಂದಿದ್ದು, ಕಳೆದ ಸಾಲಿನಲ್ಲಿ 4,13,004.3 ಲೀಟರ್ ಹಾಲು ಸಂಗ್ರಹಣೆ ಮಾಡಿ, ₹6,89,69,737.37 ಮೊತ್ತದ ವ್ಯವಹಾರ ನಡೆಸಿದೆ. ಈ ಅವಧಿಯಲ್ಲಿ ಸಂಘವು ₹4,30,337.80 ನಿವ್ವಳ ಲಾಭ ಗಳಿಸಿದೆ.
ಸಭಾಧ್ಯಕ್ಷತೆಯನ್ನು ವಹಿಸಿದ ಸಂಘದ ಅಧ್ಯಕ್ಷ ಗುರುಪ್ರಸಾದ್ ಕೆ ಮಾತನಾಡಿ – “ಸದಸ್ಯರು ಹಾಗೂ ಸಿಬ್ಬಂದಿಗಳ ಶ್ರಮದಿಂದ ಸಂಘ ಲಾಭದಲ್ಲಿ ಸಾಗುತ್ತಿದೆ. ರೈತರ ಅನುಕೂಲಕ್ಕಾಗಿ ಎಲ್ಲಾ ರೀತಿಯ ಸಹಾಯವನ್ನು ಸಂಘ ನೀಡಲಿದೆ” ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಿಸ್ತರಣಾಧಿಕಾರಿ ರಾಜೇಶ್ ಕಾಮತ್ ಹಸುಗಳ ಹಾಲು ಉತ್ಪಾದನೆ ಹೆಚ್ಚಿಸುವ ಮಾರ್ಗಗಳು, ಪಶುಗಳಿಗೆ ಬರುವ ಕಾಯಿಲೆ ಮತ್ತು ಅವುಗಳ ತಡೆಗಟ್ಟುವ ಕ್ರಮಗಳು, ವಿಮೆ ಹಾಗೂ ಇತರೆ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಉಪಾಧ್ಯಕ್ಷ ಹೊನ್ನಪ್ಪ ಗೌಡ, ನಿರ್ದೇಶಕರಾದ ಮಹಾಬಲ ಶೆಟ್ಟಿ, ವೆಂಕಪ್ಪ ನಾಯ್ಕ, ಕಾಂತಪ್ಪ ಗೌಡ, ಜಯರಾಮ ಬಿ, ದಯಾನಂದ ಎಚ್, ಉಮೇಶ್ ಪಿ, ಹಾಗೂ ಮಹಿಳಾ ನಿರ್ದೇಶಕರಾದ ಸೇಸಮ್ಮ, ವಾರಿಜ, ಗಿರಿಜ, ಹೇಮಾವತಿ, ಪ್ರೇಮಾವತಿ ಉಪಸ್ಥಿತರಿದ್ದರು.

ಹೆಚ್ಚು ಹಾಲು ಹಾಗೂ ಗುಣಮಟ್ಟದ ಹಾಲು ಪೂರೈಕೆ ಮಾಡಿದ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು.

ಪ್ರಥಮ ಬಹುಮಾನ: ಶ್ರೀಮತಿ ಶ್ಯಾಮಲಾ

ದ್ವಿತೀಯ ಬಹುಮಾನ: ಪುಷ್ಪ ರಾಜ್

ತೃತೀಯ ಬಹುಮಾನ: ಪ್ರಮೀಳಾ
ಉಳಿದ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಹೊನ್ನಪ್ಪ ಗೌಡ ಸ್ವಾಗತಿಸಿದರು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅನುರಾಧ ಎಚ್ ವಾರ್ಷಿಕ ವರದಿ ಮಂಡಿಸಿ, ವಿವಿಧ ಕಾರ್ಯಸೂಚಿಗಳಿಗೆ ಸಭೆಯ ಅನುಮೋದನೆ ಪಡೆದು ಕೊಂಡರು. ನಿರ್ದೇಶಕ ಮಹಾಬಲ ಶೆಟ್ಟಿ ಧನ್ಯವಾದ ಸಮರ್ಪಿಸಿದರು.
ಸಿಬ್ಬಂದಿಗಳಾದ ನಳಿನಾಕ್ಷಿ, ಗಿರಿಜ, ಪರಮೇಶ್ವರ, ಜಯರಾಮ, ವಿಜಯ, ಜಯಂತಿ ತಮ್ಮ ಸಹಕಾರ ನೀಡಿದರು.

Post a Comment

أحدث أقدم