ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣ ಕಾರ್ಯ ನಮ್ಮಿಂದಲೇ ಆರಂಭವಾಗಬೇಕು - ಸಬ್ ಇನ್ಸ್ಪೆಕ್ಟರ್ ಅವಿನಾಶ್ ಎಚ್.

ನೆಲ್ಯಾಡಿ:"ವ್ಯಸನ ಮುಕ್ತ ವ್ಯಕ್ತಿಗಳಿಂದಲೇ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ" ಎಂದು ಉಪ್ಪಿನಂಗಡಿ ವಲಯದ ಸಬ್ ಇನ್ಸ್ಪೆಕ್ಟರ್ ಅವಿನಾಶ್ ಎಚ್ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸಮಾಜದಲ್ಲಿ ನಡೆಯುತ್ತಿರುವ ಅವ್ಯವಹಾರಗಳು ಹಾಗೂ ವಿದ್ಯಾರ್ಥಿಗಳಲ್ಲಿ ಬೆಳೆಸಲಾಗುತ್ತಿರುವ ಕೆಟ್ಟ ಚಟಗಳ ಪರಿಣಾಮವಾಗಿ, ಅವರ ಜೀವನದಲ್ಲಿ ಮಾನಸಿಕ ಹಾಗೂ ದೈಹಿಕ ಅನಾಹುತಗಳು ಉಂಟಾಗುತ್ತಿವೆ ಎಂದು ಅವರು ಸೂಚಿಸಿದರು. ವಿದ್ಯಾರ್ಥಿಗಳು ನಾಗರಿಕ ಶಿಷ್ಟಾಚಾರವನ್ನು ಪಾಲಿಸಿ, ಕೆಟ್ಟವರ ಸಂಪರ್ಕದಿಂದ ದೂರವಿದ್ದು, ಪಾವಿತ್ರ್ಯಮಯ ಆಚಾರ-ವಿಚಾರಗಳಿಂದ ಜೀವನವನ್ನು ಸಾರ್ಥಕಗೊಳಿಸಬೇಕೆಂದೂ ಅವರು ಸಲಹೆ ನೀಡಿದರು.

ಬೆಥನಿ ಕೈಗಾರಿಕಾ ತರಬೇತಿ ಸಂಸ್ಥೆ, ನಲ್ಯಾಡಿ ಹಾಗೂ ಎಸ್‌ಸಿಐ ಮತ್ತು ಉಪ್ಪಿನಂಗಡಿ ವಲಯ ಆರಕ್ಷಕ ಠಾಣೆಯ ಜಂಟಿ ಆಶ್ರಯದಲ್ಲಿ "ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣ" ವಿಷಯದಡಿ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ನೆಲ್ಯಾಡಿ ಸೀನಿಯರ್ ಚೇಂಬರ್ ಅಧ್ಯಕ್ಷ ಸೀನಿಯರ್ ಪಿಪಿಎಫ್ ಪ್ರಕಾಶ್ ಕೆ.ವೈ ವಹಿಸಿದ್ದರು.
ಬೆಥನಿ ಐಟಿಐ ನಿರ್ದೇಶಕರಾದ ರೆ. ಫಾ. ಜಾರ್ಜ್ ಸಾಮುವೆಲ್ ಒಐಸಿ, ಪ್ರಾಂಶುಪಾಲರಾದ ಸಜಿ ಕೆ. ತೋಮಸ್, ನೆಲ್ಯಾಡಿ ಪೋಲಿಸ್ ಹೊರ ಠಾಣೆಯ ಸಿಬ್ಬಂದಿಗಳಾದ ಪ್ರವೀಣ್, ಸಾಗರ್, ರವಿ ಮುಂತಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಕಿರಿಯ ತರಬೇತಿದಾರ ವರ್ಗೀಸ್ ಎನ್.ಟಿ ಕಾರ್ಯಕ್ರಮವನ್ನು ನಿರ್ವಹಿಸಿ ಎಲ್ಲರನ್ನು ವೇದಿಕೆಗೆ ಆಹ್ವಾನಿಸಿದರು. ಕಿರಿಯ ತರಬೇತಿದಾರ ಸುಬ್ರಾಯ ಸಾಯಕ್ ಮುಖ್ಯ ಅಭ್ಯಾಗತರನ್ನು ಪರಿಚಯಿಸಿ, ಎಸ್‌ಸಿಐ ನಲ್ಯಾಡಿ ಕಾರ್ಯದರ್ಶಿ ಸೀನಿಯರ್ ಪಿಪಿಎಫ್ ಉಲಹನ್ನಾನ್ ಪಿ.ಎಂ ವಂದಿಸಿದರು.
ಈ ಸಂದರ್ಭದಲ್ಲಿ ಸಬ್ ಇನ್ಸ್ಪೆಕ್ಟರ್ ಅವಿನಾಶ್ ಎಚ್ ಅವರನ್ನು ಸನ್ಮಾನಿಸಲಾಯಿತು.

Post a Comment

أحدث أقدم