ಪುತ್ತೂರಿನಲ್ಲಿ ಮೊಬೈಲ್ ಟವರ್ ಬ್ಯಾಟರಿ ಕಳವು ಪ್ರಕರಣದ ಆರೋಪಿ ಬಂಧನ.

ಪುತ್ತೂರು:ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನರಿಮೊಗರು ಗ್ರಾಮದ ಪುರುಷರಕಟ್ಟೆ ಪ್ರದೇಶದಲ್ಲಿ ಮೊಬೈಲ್ ಟವರ್‌ಗೆ ಅಳವಡಿಸಿದ್ದ ಬ್ಯಾಟರಿಗಳ ಕಳವು ಪ್ರಕರಣ ಬಯಲಿಗೆ ಬಂದಿದೆ.

ದಿನಾಂಕ 07-09-2025 ರಿಂದ 13-09-2025ರ ಅವಧಿಯಲ್ಲಿ ನಡೆದಿದ್ದ ಈ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ, ಸೆಪ್ಟೆಂಬರ್ 13ರಂದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 79/2025 ಕಲಂ: 331(3), 331(4), 305 BNS 2023ರಂತೆ ಪ್ರಕರಣ ದಾಖಲಿಸಲಾಯಿತು.

ತನಿಖೆ ಕೈಗೊಂಡ ಪೊಲೀಸರು, ಆರೋಪಿಯಾಗಿರುವ ಕೇರಳದ ಕೊಲ್ಲಂ ಮೂಲದ ಇಟ್ಟಿ ಫನಿಕ್ಕರ್ (60) ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆರೋಪಿಯಿಂದ ಕಳವುಗೈದ ಬ್ಯಾಟರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Post a Comment

أحدث أقدم