ಬಂಟ್ವಾಳ: ಮಂಚಿ ಗ್ರಾಮದಲ್ಲಿ ಯುವಕರ ನಡುವೆ ಗಲಾಟೆ – ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ಬಂಟ್ವಾಳ, ಅಕ್ಟೋಬರ್ 12: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಹೆಡ್‌ ಕಾನ್ಸ್‌ಟೆಬಲ್ ಕೃ಼ಷ್ಣ ನಾಯ್ಕ ಅವರು ಮಂಚಿ ಗ್ರಾಮದಲ್ಲಿ ಬೀಟ್‌ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಮಂಚಿ ಕಟ್ಟೆ ಎಂಬಲ್ಲಿ ಯುವಕರ ಗಲಾಟೆಯ ಮಾಹಿತಿ ದೊರಕಿದ್ದು, ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ.

ಸ್ಥಳಕ್ಕೆ ತೆರಳಿದ ವೇಳೆ ಅಲ್ಲಿ ಜನರು ಗುಂಪಾಗಿ ಸೇರಿಕೊಂಡಿದ್ದು, ವಿಜೇತ್, ರಕ್ಷಿತ್‌ ಕೊಟ್ಟಾರಿ, ಪುಷ್ಪರಾಜ್, ಅಜೇಯ್, ಜಮೀರ್ ಮತ್ತು ಮಹಮ್ಮದ್ ಮುಸ್ತಫ್‌ ಎಂಬ ಯುವಕರು ಪರಸ್ಪರ ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡು ಹೊಡೆದಾಡಿಕೊಂಡಿರುವುದು ಪತ್ತೆಯಾಗಿದೆ.

ಸಾರ್ವಜನಿಕ ಸ್ಥಳದಲ್ಲಿ ದ್ವೇಷವನ್ನು ಉಂಟುಮಾಡುವ ಮತ್ತು ಸೌಹಾರ್ದತೆಗೆ ಧಕ್ಕೆ ತರಿಸುವ ರೀತಿಯಲ್ಲಿ ವರ್ತಿಸಿದ್ದರಿಂದ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 153/2025 ಕಲಂ 189(2), 191(2), 196(1)(a), 196(1)(b) ಹಾಗೂ 190 BNS ಅಡಿ ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಲಾಗಿದೆ.

ಪೊಲೀಸರು ಘಟನೆ ಕುರಿತು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Post a Comment

أحدث أقدم