*ನೆಲ್ಯಾಡಿ ಗ್ರಾಮದ ಕೊಪ್ಪ ಮಾದೇರಿಯಲ್ಲಿ ಶಾರ್ಟ್ ಸರ್ಕ್ಯುಟ್ ಮನೆ ಬೆಂಕಿಗಾಹುತಿ...*

ಮಾದೇರಿ ನಿವಾಸಿ ಕೊಪ್ಪ ಮಾದೇರಿ ನಿವಾಸಿ ಕೆ. ವಿ. ಜೋಸೆಫ್ ರವರ ಪುತ್ರ ಅಧ್ಯಾಪಕರಾದ ಜೋಸ್ ಪ್ರಕಾಶ್ ರವರ ಮನೆಯಲ್ಲಿ ಇಂದು ಮದ್ಯಾಹ್ನ ಹೊತ್ತಿನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯುಟ್ ನಿಂದಾಗಿ ಬೆಂಕಿ ಕಾಣಿಸಿ ಕೊಂಡಿದ್ದು ಮನೆಯ ವಿದ್ಯುತ್ ಸಲಕರಣೆ, ಮತ್ತು ಮನೆಯ ಹೊರಭಾಗದಲ್ಲಿ ನಿಲ್ಲಿಸಿರುವ ಹೊಸ ಸ್ಕೂಟರ್ ಸೇರಿದಂತೆ ಹಲವು ವಸ್ತುಗಳು ಬೆಂಕಿಯಿಂದ ಪೂರ್ತಿ ಸುಟ್ಟು ಹೋಗಿರುತ್ತದೆ ಅಲ್ಲದೆ ಸುಮಾರು 4ಲಕ್ಷಕ್ಕೂ ಮಿಕ್ಕಿ ನಷ್ಟ ಸಂಭವಿಸಿದೆ, ಅಕ್ಕ ಪಕ್ಕದವರು ಬೆಂಕಿ ಆರಿಸಿದ್ದರಿಂದ ಹೆಚ್ಚಿನ ಹಾನಿಯಾಗುವುದು ತಪ್ಪಿದೆ, ಮನೆಯಲ್ಲಿ ಯಾರು ಇಲ್ಲದೇ ಇರುವುದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ, ಉಳಿದ ವಿಷಯಗಳು 
ಇನ್ನಷ್ಟೇ ತಿಳಿದು ಬರಬೇಕಿದೆ.ಈ ಸಂದರ್ಭದಲ್ಲಿ ಬೆಥನಿ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ವರ್ಗಿಸ್ ಕೈಪನಡ್ಕ, ನೆಲ್ಯಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರು ಸಲಾಂ ಬಿಲಾಲ್, ಪಂಚಾಯತ್ ಸಿಬ್ಬಂದಿ ಪ್ರಸಾದ್, ಫಾ. ಶಾಜಿ ಮತ್ತಿತರರು ಭೇಟಿ ನೀಡಿದರು.

Post a Comment

Previous Post Next Post