ನೆಲ್ಲ್ಯಾಡಿ. ಯಕ್ಷ ಗುರು ಪ್ರಶಾಂತ್ ಶೆಟ್ಟಿ ನೆಲ್ಯಾಡಿ ಇವರ ನೇತೃತ್ವದ ಶಬರೀಶ ಯಕ್ಷಗಾನ ಕಲಾ ಕೇಂದ್ರದ 8ನೇ ವರ್ಷದ ವಾರ್ಷಿಕೋತ್ಸವ ಆಗಸ್ಟ್ 8ರಂದು ನೆಲ್ಯಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಕಲಾ ಮಂದಿರ ನಡೆಯಿತು ಉದ್ಯಮಿ,ಧಾರ್ಮಿಕ ಮುಂದಾಳು ಕಿರಣ್ ಚಂದ್ರ ಪುಷ್ಪ ಗಿರಿ ದೀಪ ಬೆಳಗಿ ಉದ್ಘಾಟಿಸುತ್ತ.ಸನಾತನ ಸಂಸ್ಕೃತಿಯ ಉಳಿವಿಗೆ ಕರಾವಳಿಯ ಗಂಡು ಕಲೆ ಯಕ್ಷಗಾನದ ಕೊಡುಗೆ ಅಸಾದಾರಣ ವಾದುದು ಜಾತಿ ಮತ ಧರ್ಮದ ಸ್ಪರ್ಶವಿಲ್ಲದ ಸಾಂಸ್ಕೃತಿಕ ಕಲೆ ಯಕ್ಷಗಾನದ ಉಳಿವಿಗೆ ಮುಗ್ದ ಮನಸಿನ ಮಕ್ಕಳನ್ನು ನಾವು ಪ್ರಚೋದಿಸಬೇಕಿದೆ, ಪ್ರಸ್ತುತ ದಿನಗಳಲ್ಲಿ ನಮ್ಮ ಮಕ್ಕಳು ಮೊಬೈಲ್ನಲ್ಲಿ ರೀಲ್ಸ್ ಮಾಡುತ್ತ, ಟಿವಿ ನೋಡುತ್ತಾ ಪಶ್ಚಾತ್ಯಾ-ಸಂಸ್ಕೃತಿಯನ್ನು ಅನುಸರಿಸುವ ಈ ದಿನಗಳಲ್ಲಿ ಜಗತ್ತಿನ ದೇವರಕೋಣೆ ಎಂದು ಕರೆಯಲ್ಪಡುವ ಭಾರತದಲ್ಲಿ ನಾವು ಕರಾವಳಿಗರು ಉಸಿರಾಡುವ ಗಾಳಿಯಿಂದ ತೊಡಗಿ ಜಡ-ಕಲ್ಲಿನಲ್ಲು ದೇವರನ್ನು ಕಾಣುವ ಸಾಂ ಸ್ಕೃತಿಕ ಪರಂಪರೆಯುಳ್ಳ ನಾವು ನಮ್ಮ ಆರಾದನ ಕಲೆ ಯಕ್ಷಗಾನದಲ್ಲಿ ತೊಡಗಿಸಿ ಕೊಳ್ಳುವ ಮೂಲಕ ಪುರಾಣ ಪುಣ್ಯ ಕಥೆಗಳ ಜ್ಞಾನ ವನ್ನು ಬೆಳಿಸಿ ಕೊಳ್ಳು ವುದಕ್ಕೆ ಸಾಧ್ಯವಿದೆ ಹಾಗಾಗಿ ಯಕ್ಷಗಾನ ನಮ್ಮ ಸಂಸ್ಕೃತಿ -ಸಂಸ್ಕಾರ, ತುಳುವರ ಅಸ್ಮಿತೆ ಎಂದರು.ಕಲಾ ಕೇಂದ್ರದ ಅಧ್ಯಕ್ಷರಾದ ಸುಧೀರ್ ಕುಮಾರ್ ಕೆ. ಎಸ್ ಸಭಾಧ್ಯಕ್ಷತೆ ವಹಿಸಿದ್ದರು, ವೇದಿಕೆಯಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷರಾದ ಡಾ. ಸದಾನಂದ ಕುಂದರ್,ಕಡಬ ಉಪ ತಹಸೀಲ್ದಾರ್ ಗೋಪಾಲ್ ಕೆ, ನೆಲ್ಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲ್, ಕಡಬ ಶ್ರೀ ದೇವಿ ಯಕ್ಷಗಾನ ಕೇಂದ್ರದ ಅಧ್ಯಕ್ಷರು ಕಿಶನ್ ಕುಮಾರ್ ಶೆಟ್ಟಿ,ಜೊತೆ ಕಾರ್ಯದರ್ಶಿ ಜಯಂತಿ ಉಪಸ್ಥಿತರಿದ್ದರು.
ಸನ್ಮಾನ ಕಾರ್ಯಕ್ರಮ..... ಯಕ್ಷ ಕಲಾ ಪೋಷಕ ಸುಬ್ರಮಣ್ಯದ ಪದ್ಮನಾಭ ಮುಚ್ಚಿತ್ತಾಯ ದಂಪತಿಗಳಿಗೆ, ಕಲಾ ಕೇಂದ್ರದ ಗೌರವಾಧ್ಯಕ್ಷರಾದ ಜಯಾನಂದ ಬಂಟ್ರಿಯಾಲ್ ದಂಪತಿಗಳಿಗೆ,ಮತ್ತು ಯಕ್ಷ ಗುರು ಪ್ರಶಾಂತ್ ಶೆಟ್ಟಿ ನೆಲ್ಯಾಡಿ ಇವರನ್ನು ಸನ್ಮಾನಿಸಲಾಯಿತು.
ಕಲಾ ಕೇಂದ್ರದ ಅಧ್ಯಕ್ಷರಾದ ಸುಧೀರ್ ಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು, ಕೋಶಾಧಿಕಾರಿ ಆನಂದ ಅಜಿಲ ಧನ್ಯವಾದ ಸಮರ್ಪಿಸಿ, ಹರಿಪ್ರಸಾದ್ ಕೆದಿಲ್ಲಾಯ ನಿರೂಪಿಸಿದರು
Post a Comment