ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಗತಿಪರ ಕೃಷಿಕರಾದ ಶ್ರೀ ಶಿವರಾಮ ಗೌಡ ಪರಮಲೆ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ದೊಡ್ಡಣ್ಣ ಗೌಡ ಪರಮಲೆ ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಉದ್ಘಾಟಿಸಿ ಕ್ರೀಡಾಪಟುಗಳಿಗೆ ಶುಭಹಾರೈಸಿದರು.
ರೈತ ಯುವಕ ಮಂಡಲದ ಅಧ್ಯಕ್ಷ ಜೀವಿತ್ ಪರಮಲೆ ಸಭಾಧ್ಯಕ್ಷತೆಯನ್ನು ವಹಿಸಿ, ಕ್ರೀಡಾಪಟುಗಳಿಗೆ ಸಮಯ ಪಾಲನೆ, ಶಿಸ್ತು ಮತ್ತು ಕ್ರೀಡಾ ಆತ್ಮಭಾವದ ಮಹತ್ವವನ್ನು ಮನವರಿಕೆ ಮಾಡಿಸಿದರು.
ಯುವಕ ಮಂಡಲದ ಗೌರವಾಧ್ಯಕ್ಷ ಮನುದೇವ್ ಪರಮಲೆ, ಕಂದಾಯ ನಿರೀಕ್ಷಕರಾದ ರಂಜನ್ ಕಲ್ಕುದಿ, ಏನೇಕಲ್ಲು ಕೃಷಿಪತಿನ ಸಹಕಾರಿ ಸಂಘದ ನಿರ್ದೇಶಕರಾದ ಶಿವಪ್ರಸಾದ್ ಮಾದನಮನೆ, ದ.ಕ. ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾದ ಭರತ್ ನೆಕ್ರಾಜೆ, ಹಾಗೂ ಆದಿಶಕ್ತಿ ಭಜನಾ ಮಂದಿರದ ಅಧ್ಯಕ್ಷ ಲಕ್ಷ್ಮಣ ಸಂಕಡ್ಕ ವೇದಿಕೆಯಲ್ಲಿ ಅತಿಥಿಗಳಾಗಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರ್ವಹಣೆಯನ್ನು ಶ್ರೀಮತಿ ಲಾವಣ್ಯ ಸುಧಾ ಪರಮಲೆ ಕೈಗೊಂಡು ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಪಂದ್ಯಾಟದ ಸಂಯೋಜಕರಾಗಿ ಆಕಾಶ್ ಪರಮಲೆ, ಚೇತನ್ ಪರಮಲೆ ಹಾಗೂ ಅವರ ಸಂಪೂರ್ಣ ತಂಡ ಅತ್ಯುತ್ತಮ ರೀತಿಯಲ್ಲಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಪಂದ್ಯಾಟದಲ್ಲಿ ಒಟ್ಟು 33 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿವೆ. ಅಂತಿಮ ಫಲಿತಾಂಶ ಹೀಗಿದೆ :
🏆 ಪ್ರಥಮ ಬಹುಮಾನ – ಲೋಬೋ ಫ್ರೆಂಡ್ಸ್, ಸಾರಿಪಳ್ಳ
🥈 ದ್ವಿತೀಯ ಬಹುಮಾನ – ಟೀಮ್ ಶಬರಿ, ಮಂಗಳೂರು
🥉 ತೃತೀಯ ಬಹುಮಾನ – ವಿ.ಎಚ್.ಎಸ್., ಎಡಮಂಗಲ
🎖️ ಚತುರ್ಥ ಬಹುಮಾನ – ಶ್ರೀ ದುರ್ಗಾ ಫ್ರೆಂಡ್ಸ್, ದೋಲ್ಪಾಡಿ
ಈ ಸಂದರ್ಭದಲ್ಲಿ ಗ್ರಾಮಸ್ಥರು, ಕ್ರೀಡಾಪ್ರೇಮಿಗಳು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಭರ್ಜರಿ ಯಶಸ್ಸು ತಂದುಕೊಟ್ಟರು.
إرسال تعليق