ಕೋಟೇಶ್ವರ:ಶ್ರೀ ಸುಬ್ರಹ್ಮಣ್ಯ ದೇವರಿಗೆ ಸಮರ್ಪಣೆಯಾಗಲಿರುವ ಬೆಳ್ಳಿರಥದ ನಿರ್ಮಾಣ ಕಾರ್ಯ ಭವ್ಯವಾಗಿ ಪೂರ್ಣಗೊಂಡಿದೆ. ಕೋಟೇಶ್ವರದಲ್ಲಿ ಎಲ್ಲ ವಿಧದ ಪೂಜಾ ವಿಧಿವಿಧಾನಗಳೊಂದಿಗೆ ರಥವನ್ನು ಪೂಜಿಸಿ ಇಂದು ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಈ ಬೆಳ್ಳಿರಥವನ್ನು ನಿರ್ಮಿಸಿದವರು ಜಕಣಾಚಾರಿ ಪ್ರಶಸ್ತಿ ಪುರಸ್ಕೃತ ರಥಶಿಲ್ಪಿ ಕೋಟೇಶ್ವರ ಬಿ. ಲಕ್ಷ್ಮೀನಾರಾಯಣ ಆಚಾರ್ಯರು ಹಾಗೂ ಅವರ ಪುತ್ರ ಶ್ರೀ ಗೋಪಾಲಾಚಾರ್ಯರು. ನವೆಂಬರ್ 3ರಂದು ಅವರು ಈ ಮಹತ್ತರವಾದ ರಥವನ್ನು ಅಧಿಕೃತವಾಗಿ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಡಾ. ರೇಣುಕಾ ಪ್ರಸಾದ್, ಡಾ. ಜ್ಯೋತಿ ಆರ್. ಪ್ರಸಾದ್, ಶ್ರೀ ಮೌರ್ಯ ಆರ್. ಪ್ರಸಾದ್ ಕುರುಂಜಿ, ಡಾ. ಅಭಿಜ್ಞ ಗೋಕುಲ್, ಗೋಕುಲ್ ಹಾಗೂ ಅನೇಕ ಗಣ್ಯರು ಮತ್ತು ಭಗವದ್ಭಕ್ತರು ಉಪಸ್ಥಿತರಿದ್ದರು.
ಬೆಳ್ಳಿರಥವು ಇಂದು ಕುಂಭಾಶಿಯಿಂದ ಹೊರಟಿದ್ದು, ನವೆಂಬರ್ 5ರಂದು ಕುಕ್ಕೆ ಶ್ರೀ ಕ್ಷೇತ್ರಕ್ಕೆ ಆಗಮಿಸಲಿದೆ.
🪔 ಸಮರ್ಪಣಾ ವಿಧಿವಿಧಾನಗಳು:
📅 ನವೆಂಬರ್ 9: ವಾಸ್ತು ಹೋಮ, ಶುದ್ಧಿ ಕಲಶಗಳು, ವಾಸ್ತು ಬಲಿ ಮತ್ತು ವಾಸ್ತು ಪೂಜೆ
📅 ನವೆಂಬರ್ 10: ಬೆಳಿಗ್ಗೆ 7 ಗಂಟೆಯಿಂದ ಸುಬ್ರಮಣ್ಯ ಹೋಮ ಮತ್ತು ಅವಮಾನ ಹೋಮ
ನಂತರ ಶ್ರೀ ದೇವರಿಗೆ ಬೆಳ್ಳಿರಥ ಸಮರ್ಪಣೆ ನಡೆಯಲಿದ್ದು, ಅದೇ ರಾತ್ರಿ 8:00 ಗಂಟೆಗೆ ಕುಕ್ಕೆ ಪುರದೊಡೆಯ ಶ್ರೀ ಸುಬ್ರಹ್ಮಣ್ಯ ದೇವರು ಬೆಳ್ಳಿರಥದಲ್ಲಿ ವಿರಾಜಮಾನರಾಗಿ ಭವ್ಯ ರಥೋತ್ಸವ ನಡೆಯಲಿದೆ.
Post a Comment