ಮೆಸ್ಕಾಂ ಗುತ್ತಿಗಾರು ವಿದ್ಯುತ್ ಉಪ ಕೇಂದ್ರದಿಂದ ವಿದ್ಯುತ್ ನಿಲುಗಡೆ.

ಸುಬ್ರಹ್ಮಣ್ಯ ನವಂಬರ್ 6 : ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ಇಂದ ವಿದ್ಯುತ್ ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡುವ ಉದ್ದೇಶದಿಂದ ಗುತ್ತಿಗಾರು ವಿದ್ಯುತ್ ಉಪ ಕೇಂದ್ರದಿಂದ ಹೊಸದಾಗಿ ನಾಲ್ಕು 11 ಕೆವಿ ಫೀಡರ್ಗಳನ್ನು ರಚಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿರುತ್ತದೆ. ಕಾಮಗಾರಿಯನ್ನು ಅತಿ ಶೀಘ್ರವಾಗಿ ಪೂರ್ಣಗೊಳಿಸುವ ಸಲುವಾಗಿ ಪ್ರತಿ ಮಂಗಳವಾರ,ಗುರುವಾರ,ಮತ್ತು ಶನಿವಾರದಂದು ಸದರಿ ಉಪ ಕೇಂದ್ರದಿಂದ ಹೊರಡುವ ಗುತ್ತಿಗಾರು ಮತ್ತು ಮತ್ತು ಕುತ್ಕುಂಜ 11 KV ಪೀಡರಿಗೆ ಬೆಳಿಗ್ಗೆ ಗಂಟೆ 10 ರಿಂದ ಸಂಜೆ 6:00 ವರೆಗೆ ವಿದ್ಯುತ್ ಉಪ ಕೇಂದ್ರದಿಂದ ವಿದ್ಯುತ್ ನಿಲುಗಡೆ ಮಾಡಲಾಗುವುದೆಂದು ಹಾಗೂ ಉಳಿದ ದಿನಗಳಲ್ಲಿ ಕಾಮಗಾರಿಗೆ ಅನಿವಾರ್ಯವಿದ್ದಲ್ಲಿ ಸ್ವಲ್ಪ ಅವಧಿ ವಿದ್ಯುತ್ ನಿಲುಗಡೆ ಮಾಡಲಾಗುವುದು. ಇದರಿಂದ ಗುತ್ತಿಗಾರು ಶಾಖ ವ್ಯಾಪ್ತಿಯ ಗುತ್ತಿಗಾರು, ದೇವಚಳ್ಳ, ಮಡಪಾಡಿ, ನೆಲ್ಲೂರು ಕೆಮ್ಮರಾಜ್ ಗ್ರಾಮಗಳಿಗೆ ವಿದ್ಯುತ್ ಸರಬರಾಜಲ್ಲಿ ವ್ಯತ್ಯಯ ಆಗದಿರುವುದರಿಂದ ಗ್ರಾಹಕರು ಸಹಕರಿಸಬೇಕಾಗಿ ಸುಬ್ರಹ್ಮಣ್ಯ ಮೆಸ್ಕಾಂ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿರುತ್ತಾರೆ.

Post a Comment

Previous Post Next Post