ಸುಬ್ರಹ್ಮಣ್ಯ, ನವೆಂಬರ್ 26: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಚಂಪಾ ಷಷ್ಠಿ ಜಾತ್ರಾ ಮಹೋತ್ಸವಕ್ಕೆ ಬಂದಿದ್ದ ಮಹಿಳೆಯೊಬ್ಬರ ಸರ ಸುಮಾರು ₹6 ಲಕ್ಷ ಮೌಲ್ಯದ ಚಿನ್ನದ ಮಾಂಗಲ್ಯ ಕಳುವಾಗಿದೆ. ಈ ಸಂಬಂಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫಿರ್ಯಾದಿ ಹೇಮಲತಾ ಯು (52), ನಿವಾಸ ತುಂಬೆತ್ತಡ್ಕ ಮನೆ, ಕಡಬ ಗ್ರಾಮ, ಅವರು ಬೆಳಗ್ಗೆ 6.50ಕ್ಕೆ ದೇವರ ದರ್ಶನಕ್ಕಾಗಿ ದೇವಸ್ಥಾನ ಪ್ರವೇಶಿಸಿದ್ದರು. ನಂತರ ರಥಬೀದಿಯ ಬಲ ಭಾಗದಲ್ಲಿ ನಿಂತು ಉತ್ಸವ ವೀಕ್ಷಿಸುತ್ತಿದ್ದ ವೇಳೆ ಭಾರೀ ಜನಸಂದಣಿ ಕಂಡು ದೇವಸ್ಥಾನದ ಒಳಗೆ ತೆರಳುತ್ತಾರೆ.
ದೇವಾಲಯದೊಳಗೆ ತಮ್ಮ ಪರಿಚಿತರಾದ ಬೇಬಿ ಬಿದ್ದಪ್ಪ ಅವರು “ನಿಮ್ಮ ಕತ್ತಿನಲ್ಲಿದ್ದ ಸರ ಕಾಣುತ್ತಿಲ್ಲ” ಎಂದು ಹೇಳಿದಾಗ, ಹೇಮಲತಾ ಅವರು ತಕ್ಷಣ ಪರಿಶೀಲಿಸಿದ್ದು, ತಮ್ಮ ಮಾಂಗಲ್ಯ ಸರ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಈ ಘಟನೆ ಬೆಳಗ್ಗೆ 8.50ರ ಸುಮಾರಿಗೆ ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.
ಜಾತ್ರೆಯಲ್ಲಿ ಹೆಚ್ಚು ಜನಸಂದಣಿ ಇರುವುದನ್ನು ದುರುಪಯೋಗಪಡಿಸಿಕೊಂಡು, ಅಪರಿಚಿತರು ಹೇಮಲತಾ ಅವರ ಗಮನಕ್ಕೆ ಬಾರದಂತೆ ಮಾಂಗಲ್ಯವನ್ನು ಕಳವು ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳವಾಗಿರುವ ಸರದ ತೂಕ ಸುಮಾರು 100 ಗ್ರಾಂ ಆಗಿದ್ದು, ಅದರ ಅಂದಾಜು ಮೌಲ್ಯ ರೂ. 6,00,000 ಎಂದು ಅಂದಾಜಿಸಲಾಗಿದೆ.
ಈ ಸಂಬಂಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ
ಅಪರಾಧ ಸಂ. 59/2025,
ಕಲಂ 303(2) BNS–2023 ಅಡಿಯಲ್ಲಿ ಪ್ರಕರಣ ದಾಖಲಾಗಿ ಮುಂದಿನ ತನಿಖೆ ನಡೆಯುತ್ತಿದೆ.
Post a Comment