ಸುಬ್ರಹ್ಮಣ್ಯ: ಭಕ್ತರ ಸೇವಾಭಾವದಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮತ್ತೆ ಮಾನವೀಯತೆ ಮೂಡಿಬಂದಿದೆ. ವೃದ್ಧರು ಹಾಗೂ ನಡೆದಾಡಲು ತೊಂದರೆ ಅನುಭವಿಸುವ ಭಕ್ತರಿಗೆ ನೆರವಾಗುವ ಉದ್ದೇಶದಿಂದ ಶಿವಮೊಗ್ಗದ ಕುಕ್ಕೆ ಕ್ಷೇತ್ರದ ಭಕ್ತರು ದಾನವಾಗಿ ನೀಡಿದ ಎರಡು ವೀಲ್ ಚೇರ್‌ಗಳನ್ನು ದೇವಳಕ್ಕೆ ಅಧಿಕೃತವಾಗಿ ಹಸ್ತಾಂತರಿಸಲಾಯಿತು.
ಮಂಗಳವಾರ ನಡೆದ ಈ ಕಾರ್ಯಕ್ರಮದಲ್ಲಿ ಶಿವಮೊಗ್ಗದ ತರಿಕೇರಿ ಸರ್ಕಾರಿ ಪಿಯು ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕ ಕಿರಣ್ ಕುಮಾರ್ ಹಾಗೂ ಗಜಾನನ ಮೆಡಿಕಲ್ ಮಾಲೀಕರಾದ ವಿನಾಯಕ ಸ್ವಾಮಿ ಅವರು ವೀಲ್‌ಚೇರ್‌ಗಳನ್ನು ಕೊಡುಗೆಯಾಗಿ ನೀಡಿದರು.
ಅವರ ಪರವಾಗಿ ಎಸ್.ಎಸ್.ಪಿ.ಯು. ಕಾಲೇಜಿನ ಉಪನ್ಯಾಸಕ ಸೋಮಶೇಖರ ನಾಯಕ್ ಅವರು ವೀಲ್ ಚೇರ್‌ಗಳನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಅವರಿಗೆ ಹಸ್ತಾಂತರಿಸಿದರು.
ಈ ವೇಳೆ ಹರೀಶ್ ಇಂಜಾಡಿ ಅವರು ದಾನಿಗಳ ಸೇವಾಸ್ಪೂರ್ತಿಯನ್ನು ಮೆಚ್ಚಿ, ದೇವಳದ ವತಿಯಿಂದ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯೆ ಲೀಲಾ ಮನಮೋಹನ್, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಲೋಲಾಕ್ಷ ಕೈಕಂಬ, ಎಸ್.ಎಸ್.ಪಿ.ಯು. ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್, ವಸಂತ ಕೆದಿಲ, ಪ್ರದೀಪ್ ಕಳಿಗೆ, ವಿಜಯಕುಮಾರ್ ನಡುತೋಟ ಮತ್ತಿತರರು ಭಾಗವಹಿಸಿದ್ದರು.
Post a Comment