ಚಿತ್ರನಟಿ ನಯನತಾರ ದಂಪತಿಗಳು ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನಪಡೆದು – ಸರ್ಪ ಸಂಸ್ಕಾರ ಪೂಜೆ ನೆರವೇರಿಸಿದರು.

ಪ್ರಸಿದ್ಧ ದಕ್ಷಿಣ ಭಾರತೀಯ ಚಿತ್ರನಟಿ ನಯನತಾರ ಹಾಗೂ ಅವರ ಪತಿ, ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್ ದಂಪತಿಗಳು ಬುಧವಾರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸಿ ಸರ್ಪ ಸಂಸ್ಕಾರ ಪೂಜೆ ನೆರವೇರಿಸಿದರು.
ನಯನತಾರ ಅವರು ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಚಿತ್ರಗಳಲ್ಲಿ ನಟಿಸಿರುವ ಪ್ರಖ್ಯಾತ ನಟಿ. ಹಲವು ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ಪ್ರಮುಖ ಪಾತ್ರವಹಿಸಿರುವ ಅವರು "ಲೇಡಿ ಸೂಪರ್‌ಸ್ಟಾರ್" ಎಂಬ ಹೆಸರಿನಿಂದ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ ದೇವರ ಆಶೀರ್ವಾದ ಪಡೆಯುವ ಉದ್ದೇಶದಿಂದ ಹಾಗೂ ಸರ್ಪ ದೋಷ ಪರಿಹಾರಕ್ಕಾಗಿ ದಂಪತಿಗಳು ವಿಶೇಷ ಪೂಜೆ ಸಲ್ಲಿಸಿದರು. ಪೂಜಾ ವಿಧಿಗಳು ದೇವಳದ ಅರ್ಚಕರ ಮಾರ್ಗದರ್ಶನದಲ್ಲಿ ಭಕ್ತಿಯಿಂದ ನೆರವೇರಿಸಿದರು.

ಈ ಸಂದರ್ಭದಲ್ಲಿ ದೇವಳದ ವತಿಯಿಂದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಅವರು ದಂಪತಿಗೆ ಶಾಲು ಹೊದಿಸಿ, ದೇವರ ಪ್ರಸಾದ ನೀಡಿ ಗೌರವಿಸಿದರು.

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸರ್ಪ ದೋಷ ನಿವಾರಣೆಗೆ ಸರ್ಪ ಸಂಸ್ಕಾರ, ಅಶ್ಲೇಷ ಬಲಿ ಪೂಜೆಗಳು ಪ್ರತಿದಿನ ನೂರಾರು ಭಕ್ತರಿಂದ ನೆರವೇರಿಸುತ್ತಿದ್ದು, ನಯನತಾರ ದಂಪತಿಗಳು ಯಿಂದು ಪೂಜೆ ನೆರವೇರಿಸಿದರು.

Post a Comment

أحدث أقدم