ಸಮರ್ಪಿಸಲ್ಪಟ್ಟ ಬೆಳ್ಳಿರಥದಲ್ಲಿ ನವೆಂಬರ್ 10ರಂದು ಶ್ರೀ ಸುಬ್ರಹ್ಮಣ್ಯ ದೇವರ ಉತ್ಸವವು ಅದ್ದೂರಿಯಿಂದ ಜರುಗಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಅವರ ಮುಂದಾಳತ್ವದಲ್ಲಿ ನಡೆದ ಈ ರಥೋತ್ಸವದಲ್ಲಿ ಭಕ್ತಾಧಿಗಳ ಉತ್ಸಾಹ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಮಿತಿ ಸದಸ್ಯೆಯರಾದ ಶ್ರೀಮತಿ ಸೌಮ್ಯ ಭರತ್, ಶ್ರೀಮತಿ ಲೀಲಾ ಮನಮೋಹನ್, ಶ್ರೀಮತಿ ಪ್ರವೀಣಾ ರೈ, ಸದಸ್ಯ ಅಶೋಕ್ ನೆಕ್ರಜೆ, ಮಾಸ್ಟರ್ ಪ್ಲಾನ್ ಸದಸ್ಯ ಸತೀಶ್ ಕುಜುಗೋಡು, ಪವನ್ ಎಂ.ಡಿ., ಲೋಕಕ್ಷ ಕೈಕಂಬ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರದಾನ ಅರ್ಚಕರ ನೇತೃತ್ವದಲ್ಲಿ ಶ್ರೀ ದೇವರ ರಥೋತ್ಸವದ ಧಾರ್ಮಿಕ ವಿಧಿವಿಧಾನಗಳು ಶ್ರದ್ಧಾಭಕ್ತಿಯೊಂದಿಗೆ ನೆರವೇರಿದವು. ಸುಳ್ಯದ ಭಕ್ತರಿಂದ ಅರ್ಪಿಸಲ್ಪಟ್ಟ ಬೆಳ್ಳಿರಥದಲ್ಲಿ ಶ್ರೀ ದೇವರ ಉತ್ಸವವು ಒಳಾಂಗಣದಲ್ಲಿ ಭಕ್ತಿಭಾವದಿಂದ ನಡೆಯಿತು.
ಬೆಳ್ಳಿರಥ ಸಮರ್ಪಿಸಿದ ಭಕ್ತರು ಹಾಗೂ ಅವರ ಕುಟುಂಬಸ್ಥರು ವಿಶೇಷವಾಗಿ ಹಾಜರಿದ್ದರು, ಎಲ್ಲ ಭಕ್ತರ ಶ್ರಮದಿಂದ ಬೆಳ್ಳಿರಥೋತ್ಸವವು ಭಕ್ತಿ–ಸಾಂಸ್ಕೃತಿಕ ಸಂಭ್ರಮಕ್ಕೆ ಉತ್ತಮ ವೇದಿಕೆಯಾಯಿತು.
إرسال تعليق