ಕಲ್ಮಕರು,ನಿವಾಸಿ ನಾಪತ್ತೆ–ವ್ಯಕ್ತಿಯ ಸುಳಿವು ಸಿಕ್ಕಿದರೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ!

ಕುಕ್ಕೆ ಸುಬ್ರಹ್ಮಣ್ಯ;ಕಲ್ಮಕರು, ನಿವಾಸಿ ಕಾಣೆಯಾಗಿರುವ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಸುಬ್ರಹ್ಮಣ್ಯ ಠಾಣಾ ಅಪರಾಧ ಸಂಖ್ಯೆ 37/2025ರಲ್ಲಿ ವ್ಯಕ್ತಿ ಕಾಣೆಯಾದ ಪ್ರಕರಣ ದಾಖಲಿಸಲಾಗಿದೆ. ಯಶವಂತ್ ತಂದೆ ಲಿಂಗಪ್ಪ ಕಲ್ಮಕರು, ಗ್ರಾಮ: ಕಲ್ಮಕರು, ಯಶವಂತ್ @ ಮರಿ ಎಂಬವರು 14-07-2025ರಂದು ಐನೇಕಿದು ಗ್ರಾಮದ ಕಡೆಗೆ ಹೋಗಿ ಮನೆಗೆ ಮರಳಿಲ್ಲ ಎಂದು ಕುಟುಂಬದವರು ನೀಡಿದ ಮಾಹಿತಿಯ ಮೇರೆಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ದಾಖಲಾಗಿದೆ.

ಸದರಿ ವ್ಯಕ್ತಿಯ ಕುರಿತು ಯಾವುದೇ ಮಾಹಿತಿ ಕಂಡು ಬಂದಲ್ಲಿ, ತಕ್ಷಣವೇ ಸುಬ್ರಹ್ಮಣ್ಯ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

Post a Comment

أحدث أقدم