ಸುಬ್ರಹ್ಮಣ್ಯ:ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಾಲಯ ವಠಾರದಲ್ಲಿ ಶ್ರೀ ಅಯ್ಯಪ್ಪ ಭಕ್ತ ಸಮಿತಿ ಬಿಳಿನೆಲೆ, ಶ್ರೀ ಗೋಪಾಲಕೃಷ್ಣ ದೇವಾಲಯ, ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಹಾಗೂ ಶ್ರೀಕೃಷ್ಣ ಭಜನಾ ಮಂಡಳಿ ಸಂಯುಕ್ತ ಆಶ್ರಯದಲ್ಲಿ ನಡೆದ ಶ್ರೀ ಅಯ್ಯಪ್ಪ ಭಜನೆ, ಧಾರ್ಮಿಕ ಸಭೆ ಹಾಗೂ ಕುಣಿತ ಭಜನೋತ್ಸವ ಭಕ್ತಿಯ ವಾತಾವರಣದಲ್ಲಿ ವೈಭವದಿಂದ ಜರುಗಿತು.
ಕಾರ್ಯಕ್ರಮವನ್ನು ಖ್ಯಾತ ಸಂಗೀತ ಕಲಾವಿದ ಕೆ. ಯಜ್ಞೇಶ್ ಆಚಾರ್ ದೀಪ ಬೆಳಗಿಸಿ ಉದ್ಘಾಟಿಸಿದರು. ಅಯ್ಯಪ್ಪ ಸೇವಾ ಸಮಿತಿಯ ಅಧ್ಯಕ್ಷ ಜನಾರ್ಧನ ಸೂಡ್ಲು ಅಧ್ಯಕ್ಷತೆ ವಹಿಸಿದರು.
ರಾಜ್ಯ ಭಜನಾ ಪರಿಷತ್ ಕಾರ್ಯದರ್ಶಿ ಸುಬ್ರಹ್ಮಣ್ಯ ಪ್ರಸಾದ್, ವಾಸ್ತುಶಿಲ್ಪಿ ಶ್ರೀಕೃಷ್ಣ ಮಹಾಲಿಂಗ ಪ್ರಸಾದ್, ಬಿಳಿನೆಲೆ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರಿಶ್ಚಂದ್ರ ಕಳಿಗೆ, ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಬಿ., ಕಡಬ ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಸುಂದರ ಸೂಡ್ಲು ವೇದಿಕೆಯಲ್ಲಿದ್ದರು.
ಗೌರವಾರ್ಪಣೆ
ಕಾರ್ಯಕ್ರಮದ ಅಂಗವಾಗಿ ಕಲಾವಿದ ಕೆ. ಯಜ್ಞೇಶ್ ಆಚಾರ್ ಹಾಗೂ ಅನೇಕ ವರ್ಷಗಳಿಂದ ಗುರುಸ್ವಾಮಿಗಳಾಗಿ ಸೇವೆ ಸಲ್ಲಿಸುತ್ತಿರುವ ಗುರು ಸ್ವಾಮಿಗಳಿಗೆ ಸನ್ಮಾನ ನೆರವೇರಿಸಲಾಯಿತು.
ಅಯ್ಯಪ್ಪ ಸೇವಾ ಸಮಿತಿಯ ಗೌರವಾಧ್ಯಕ್ಷ ಗೋಪಾಲಕೃಷ್ಣ ಬಿ. ಸ್ವಾಗತಿಸಿ, ಶೀನಪ್ಪ ಒಗ್ಗು ವರದಿ ವಾಚಿಸಿದರು. ದೀಕ್ಷಿತ್ ಬೈಲು ಹಾಗೂ ರಾಜೇಶ್ ಬಿಳಿನೆಲೆ ನಿರೂಪಣೆ ನೆರವೇರಿಸಿದರು. ರಾಜೇಶ್ ವಂದಿಸಿದರು.
37 ತಂಡಗಳಿಂದ ಕುಣಿತ ಭಜನೆ
ಬಳಿಕ ಕಡಬ ವಲಯ ಭಜನಾ ಪರಿಷತ್ ಅಧ್ಯಕ್ಷ ಸುಂದರ ಒಗ್ಗು ಭಜನೆಯನ್ನು ಪ್ರಾರಂಭಿಸಿ ಮುನ್ನಡೆಸಿದರು. ಹಾಡಿಗೆ ತಾಳ್ಣತನಲ್ಲಿ 37 ಭಜನಾ ತಂಡಗಳು ಸುಮಾರು ಒಂದು ಗಂಟೆಗಳ ಕಾಲ ಏಕಕಾಲದಲ್ಲಿ ಕುಣಿತ ಭಜನೆ ಪ್ರದರ್ಶಿಸಿದ್ದು, ಭಕ್ತರಿಗೆ ಮನಮೋಹಕ ಭಕ್ತಿ ಅನುಭವ ನೀಡಿತು.
ಸಮಾರಂಭದ ವಿಶೇಷ ಕ್ಷಣ
ಸಮಾರಂಭದಲ್ಲಿ ಗುರುಸ್ವಾಮಿಗಳಿಗೆ ಭವ್ಯ ಗೌರವಾರ್ಪಣೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಪ್ರಮುಖರಾದ ಕೆ. ಯಜ್ಞೇಶ್ ಆಚಾರ್, ಶ್ರೀಕೃಷ್ಣ ಮಹಾಲಿಂಗ ಪ್ರಸಾದ್, ಜನಾರ್ಧನ ಸೂಡ್ಲು, ಸುಂದರ ಒಗ್ಗು ಮತ್ತಿತರರು ಉಪಸ್ಥಿತರಿದ್ದರು.
Post a Comment