ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ರಿ.)ದಕ್ಷಿಣ ಹಾಗೂ ಉಡುಪಿ ಜಿಲ್ಲೆ ಇದರ ಸುಳ್ಯ ವಲಯದ ವತಿಯಿಂದ ಡಿ 19 ರಂದು ಕುಕ್ಕೆ ಸುಬ್ರಹ್ಮಣ್ಯದ ಪಂಚಾಯತ್ ಸಭಾಭವನದಲ್ಲಿ ಸಾಮಾನ್ಯ ಸಭೆ ನಡೆಯಿತು.ಈ ಸಂಧರ್ಭದಲ್ಲಿ ಸುಳ್ಯವಲಯದ ಅಧ್ಯಕ್ಷರಾಗಿರುವ ಶಶಿ ಗೌಡ ಸುಳ್ಯ ಫೋಟೋಗ್ರಾಫಿ ಎಂಬುದು ಕೇವಲ ಉದ್ಯಮ ಮಾತ್ರವಲ್ಲ ಪ್ರತಿಯೊಂದು ಕ್ಷಣಗಳನ್ನು ಸೆರೆ ಹಿಡಿಯುವುದಲ್ಲದೆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದು ಬಹಳ ಹೆಮ್ಮೆಯ ವಿಷಯವೆಂಬುದನ್ನು ಸಭೆಯಲ್ಲಿ ತಿಳಿಸಿದರು ಹಾಗೂ ಯಾವುದೇ ಸಂಘವನ್ನು ಎಲ್ಲ ಸದಸ್ಯರು ಒಗ್ಗಟಿನಲ್ಲಿ ಕೆಲಸ ಮಾಡುವುದರಿಂದ ಮುನ್ನಲೆಗೆ ತರುವಲ್ಲಿ ಯಶಸನ್ನು ಕಾಣಬಹುದು ಎಂದರು.ಈ ಸಂಧರ್ಭದಲ್ಲಿ ವೇದಿಕೆಯಲ್ಲಿ ಸಂಚಾಲಕರಾದ ಗೋಪಾಲ್ ಸ್ಸುಳ್ಯ ಅಧ್ಯಕ್ಷ ಶಶಿ ಗೌಡ ಸುಳ್ಯ ಉಪಾಧ್ಯಕ್ಷ ಪ್ರಶಾಂತ್ ಶೇಣಿ
ಕಾರ್ಯದರ್ಶಿ ಸತೀಶ್ ಗೋಪಾಲ್ ಸುಳ್ಯ ಕೋಶಾಧಿಕಾರಿ ವಸಂತಿ
ಜಿಲ್ಲಾ ಮಾಧ್ಯಮ ಪ್ರತಿನಿಧಿ ಲೋಕೇಶ್ ಸುಬ್ರಹ್ಮಣ್ಯ ಹಾಗೂ
ಕರುಣಾಕರ ಎಣ್ಣೆಮಜಲು,ದಿನೇಶ್ ಯೆನೇಕಲ್,ಹರೀಶ್ ರಾವ್ ಸುಳ್ಯ, ವೆಂಕಟೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುಳ್ಯ ವಲಯದ ಫೋಟೋಗ್ರಾಫರ್ಸ್ ಸಾಮಾನ್ಯ ಸಭೆ ನಡೆಯಿತು.
Post a Comment