ಸುಬ್ರಹ್ಮಣ್ಯ ಡಿಸೆಂಬರ್ 30: ಸಮಾಜದಲ್ಲಿರುವ ಅಶಕ್ತರಿಗೆ, ಬಡಬಗ್ಗರಿಗೆ,ಸೂರಿಲ್ಲದವರಿಗೆ ಸೂರು, ಒಂದು ಹೊತ್ತಿನ ಊಟ ಇಲ್ಲದವರಿಗೆ ಅನ್ನ ನೀಡುವುದು,ಬಟ್ಟೆ ಇಲ್ಲದವರಿಗೆ ಬಟ್ಟೆ ನೀಡುವುದು, ಹಾಗೆಯೇ ಸಾರ್ವಜನಿಕರ ಉಪಯೋಗಕ್ಕಾಗಿ ಮಾಡುವಂತಹ ಬಸ್ಸು ತಂಗುದಾನ, ರಿಕ್ಷಾ ತಂಗುದಾನ, ಶೌಚಾಲಯ ಅಥವಾ ಯಾವುದೇ ಜನೋಪಯೋಗಿ ಕೆಲಸಗಳು ಅದು ನಿಜವಾದ ಸಮಾಜ ಸೇವೆ ಹಾಗೂ ದೇವರ ಸೇವೆಯಾಗಿರುತ್ತದೆ. ಎಂದು ಲಯನ್ಸ್ ಜಿಲ್ಲೆ 315 Dಇದರ ಜಿಲ್ಲಾ ಗವರ್ನರ್ ಉಡುಪಿ.ಅರವಿಂದ ಶೆಣೈ
ಅವರು ಶನಿವಾರ ಪಂಜ ಲಯನ್ಸ್ ಕ್ಲಬ್ ವತಿಯಿಂದ ಬಳ್ಪದಲ್ಲಿ ನೂತನವಾಗಿ ನಿರ್ಮಿಸಲಾದ ದಿ. ಚಿನ್ನಮ್ಮ ಹಾಗೂ ದಿ. ತೆಂಕಪಾಡಿ ಶೇಷಪ್ಪ ಗೌಡ ಇವರ ಸ್ಮರಣಾರ್ಥ ಅವರ ಸುಪುತ್ರ ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ನಾಗೇಶ ತೆಂಕಪಾಡಿ , ಕೊಡುಗೆಯಾಗಿ ನೀಡಿದ ಆಟೋರಿಕ್ಷಾ ನಿಲ್ದಾಣವನ್ನ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಹಿರಿಯ ಸಹಕಾರಿ ಧುರೀಣ ಪಂಜಾ ಲಯನ್ಸ್ ನ ಸ್ಥಾಪಕರಾದ ಜಾಕೆ ಮಾಧವ ಗೌಡ, ಪ್ರಾಂತೀಯ ಅಧ್ಯಕ್ಷ ಲಯನ್l ಪ್ರೊಫೆಸರ್.ರಂಗಯ್ಯ ಶೆಟ್ಟಿಗಾರ್,ವಲಯಅಧ್ಯಕ್ಷ ದಿಲೀಪ್ ಬಾಬುಲ್ಬೆಟ್ಟು, ಕಾರ್ಯದರ್ಶಿ ಕರುಣಾಕರ ಎಣ್ಣೆ ಮಜಲ್ ಕೋಶಾಧಿಕಾರಿ ವಾಸುದೇವ ಮೇಲ್ಪಾಡಿ, ನಿಕಟ ಪೂರ್ವ ಅಧ್ಯಕ್ಷ ಶಶಿಧರ ಪಳಂಗಾಯ, ಪೂರ್ವ ಅಧ್ಯಕ್ಷರುಗಳಾದ ತುಕಾರಾಮ ಏನೇ ಕಲ್,ಕುಮಾರಸ್ವಾಮಿ ಕಿನಿಕುಮೇರಿ, ನೇಮಿರಾಜ ಪಲ್ಲೋಡಿ, ಸೀತಾರಾಮ ಎಣ್ಣೆ ಮಜಲ್, ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ವಿಮಲಾ ರಂಗಯ್ಯ, ಸಂತೋಷ್ ಜಾಕೆ, ನೇಮಿರಾಜ ಪಲ್ಲೋಡಿ,ಕುಸುಮಾದರ ಪಂಜ, ಅನುರಾಜ್ ಪಂಜ, ಆನಂದ, ಗಗನ್ ತೆಂಕಪಾಡಿ,ಪಂಜ ಲಯನ್ಸ್ ಕ್ಲಬ್ಬಿನ ಸದಸ್ಯರುಗಳು, ಬಳ್ಪ ಆಟೋ ಮಾಲಕರು ಹಾಗೂ ಚಾಲಕರು,ಸಾರ್ವಜನಿಕರು ಹಾಜರಿದ್ದರು.
إرسال تعليق