ಕುಕ್ಕೆ ಸುಬ್ರಹ್ಮಣ್ಯ:ಹರಿಪ್ರಸಾದ್ (39) ಹಾಗೂ ಸುಜೀತ್ ಗೋಳಿಯಾಡಿ (28) ಅವರು ಕುಮಾರಧಾರಾ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ದುರ್ಘಟನೆ ರವಿವಾರ ಮಧ್ಯಾಹ್ನ ಸಂಭವಿಸಿದೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅನುಗ್ರಹ ಎಂಟರ್ಪ್ರೈಸಸ್ ಹಾರ್ಡ್‌ವೇರ್ ಅಂಗಡಿಯ ಮಾಲಕರಾಗಿದ್ದ ಹರಿಪ್ರಸಾದ್ ಹಾಗೂ ಅದೇ ಅಂಗಡಿಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಸುಜೀತ್, ತಮ್ಮ ಪರಿಚಿತರಾದ ಸುಮಾರು 10 ಜನರೊಂದಿಗೆ ಕಾಲೋನಿ ಕೊನೆಯಲ್ಲಿ ಇರುವ ಕುಮಾರಧಾರಾ ನದಿಯ ಬಳಿ ವನಭೋಜನಕ್ಕೆ ತೆರಳಿದ್ದರು.
ಮಧ್ಯಾಹ್ನ ಊಟದ ಬಳಿಕ ಸ್ನಾನಕ್ಕಾಗಿ ನದಿಗೆ ಇಳಿದ ಸಂದರ್ಭ ಸುಮಾರು 2.30ರ ವೇಳೆಗೆ ಈ ದುರ್ಘಟನೆ ಸಂಭವಿಸಿದ್ದು, ಹರಿಪ್ರಸಾದ್ ಹಾಗೂ ಸುಜೀತ್ ನೀರಿನ ಆಳಕ್ಕೆ ಸಿಲುಕಿ ಮುಳುಗಿದ್ದಾರೆ ಎನ್ನಲಾಗಿದೆ.
ಘಟನೆಯ ಮಾಹಿತಿ ಪಡೆದ ತಕ್ಷಣ ಕುಕ್ಕೆ ಸುಬ್ರಹ್ಮಣ್ಯ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಹೊರತೆಗೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಘಟನೆಯ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
إرسال تعليق