ನೆಲ್ಯಾಡಿ ಜನವರಿ 15ರಂದು ಜ್ಞಾನೋದಯ ಬೆಥನಿ ಪಿ. ಯು ಕಾಲೇಜು ಮತ್ತು ಉಬಾರ್ ಚೆಸ್ ಅಕಾಡೆಮಿ ಸಹಯೋಗದಲ್ಲಿ ದ. ಕ. ಜಿಲ್ಲಾ ಶಾಲಾ ಮಟ್ಟದ 8 ರಿಂದ 16ರ ವಯೋವರ್ಗದ ಹುಡುಗಿಯರ ಮತ್ತು ಹುಡುಗರ 5 ವಿಭಾಗದ ಚೆಸ್ ಚಾಂಪಿಯನ್ ಶಿಪ್ ಸ್ಪರ್ಧೆಗಳು ನಡೆದವು.
ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಹಿರಿಯ ರಾಷ್ಟ್ರಿಯ ವಾಲಿಬಾಲ್ ಆಟಗಾರ ಜೂಲಿಯಾನ ಪೀಟರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು, ಬೆಥನಿ ವಿದ್ಯಾ ಸಂಸ್ಥೆಯ ಸಂಚಾಲಕ-ಪ್ರಾಂಶುಪಾಲ ಡಾ. ವರ್ಗಿಸ್ ಕೈಪನಡ್ಕ ಸಭಾಧ್ಯಕ್ಷತೆ ವಹಿಸಿ ಮಾತನಾಡುತ್ತ ವಿದ್ಯಾರ್ಥಿಗಳ ಮಾನಸಿಕ ಬೆಳವಣಿಗೆಯೊಂದಿಗೆ, ಏಕಾಗ್ರತೆಗೆ ಪೂರಕವಾಗಬಲ್ಲ ಚೆಸ್ ನಂತಹ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ ಎಂದರು. ವೇದಿಕೆಯ ಲ್ಲಿ ಉಬಾರ್ ಚೆಸ್ ಅಕಾಡೆಮಿಯ ನಿರ್ದೇಶಕ ಜಗನ್ನಾಥ ಅಡಪ,ಕರ್ನಾಟಕ ಚೆಸ್ ಅಸೋಸಿಯೇಷನ್ ಉಪಾಧ್ಯಕ್ಷರು ರಮೇಶ್ ಕೋಟೆ, ಭಗತ್ ರಾಮ್,ಬೆಥನಿ ವಿದ್ಯಾ ಸಂಸ್ಥೆಯ ಬರ್ಸರ್ ಸ್ಯಾಮವೆಲ್ ಜಾರ್ಜ್, ಸಹಾಯಕ ಬರ್ಸರ್ ವರ್ಗಿಸ್ ಉಪಸ್ಥಿತರಿದ್ದರು, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸನ್ನಿ ಕೆ. ಎಸ್ ಸ್ವಾಗತಿಸಿ, ಮುಖ್ಯ ಶಿಕ್ಷಕ ಜಾರ್ಜ್ ಎಂ. ಜೆ ಧನ್ಯವಾದ ಸಮರ್ಪಿಸಿದರು.
ಬೆಳಿಗ್ಗೆಯಿಂದಲೇ ಆರಂಭವಾದ ಸ್ಪರ್ಧೆಗಳು 5 ವಿಭಾಗದಲ್ಲಿ ನಡೆದವು, ಸುಮಾರು 450ಕ್ಕೂ ಮಿಕ್ಕಿಸ್ಪರ್ಧಾಳುಗಳು
ಜಿಲ್ಲೆಯ ವಿವಿಧ ಭಾಗಗಳಿಂದ ಭಾಗವಹಿಸಿ ದರು.
إرسال تعليق