ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ. ಸಾವಿರಾರು ಮಂದಿ ಭಾಗಿ - ಬಿಗಿ ಪೊಲೀಸ್ ಬಂದೋ ಬಸ್ತ್.

ಕುಕ್ಕೆ ಸುಬ್ರಹ್ಮಣ್ಯ: ದಕ್ಷಿಣ ಕನ್ನಡ ಮಲೆನಾಡು ಜನ ಹಿತ ರಕ್ಷಣಾ ವೇದಿಕೆ ವರ್ಷ ಕಡಬ, ಸುಳ್ಯ, ಬೆಳ್ತಂಗಡಿ ತಾಲೂಕಿನ ಬಾಧಿತ ಗ್ರಾಮಸ್ಥರಿಂದ ಕಸ್ತೂರಿ ರಂಗನ್ ವರದಿ ವಿರುದ್ಧ ಬೃಹತ್ ಪ್ರತಿಭಟನೆ ಸಭೆ ಕಡಬ ತಾಲೂಕಿನ ಗುಂಡ್ಯ ದಲ್ಲಿ ನಡೆಯಿತು.

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಪ್ರತಿಭಟನಾ ಸಭೆ ಉದ್ಘಾಟಿಸಿದರು. ಮಲೆನಾಡು ಜನ ಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಪ್ರಮುಖರಾದ ವಂ.ಆದರ್ಶ್, ವಂ.ಶಿಬಿ ಮುಂಡಾಜೆ, ವಂ.ಜೋಸೆಫ್ ಶಿರಾಡಿ, ವೆಂಕಪ್ಪ ಗೌಡ ಸುಳ್ಯ, ಎ.ವಿ.ತೀರ್ಥರಾಮ, ಸಯ್ಯದ್ ಮೀರಾ ಸಾಹೇಬ್, ಕೃಷ್ಣ ಶೆಟ್ಟಿ ಕಡಬ, ಪಿ.ಪಿ.ವರ್ಗೀಸ್, ಸರ್ವೋತ್ತಮ ಗೌಡ ನೆಲ್ಯಾಡಿ, ಹರೀಶ್ ಕಂಜಿಪಿಲಿ, ವೆಂಕಟ್ ದಂಬೆಕೋಡಿ, ಆಶಾ ತಿಮ್ಮಪ್ಪ, ಮಹಮ್ಮದ್ ಆಲಿ ಹೊಸಮಠ, ಸುಧೀರ್ ಕುಮಾರ್, ವೆಂಕಟ್ ವಳಲಂಬೆ, ವಂ.ವರ್ಗೀಸ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಧನಂಜಯ ಕೋಡಂಗೆ ಸ್ವಾಗತಿಸಿದರು.
  ಪ್ರತಿಭಟನಾ ಸಭೆಯಲ್ಲಿ ಮೂರು ತಾಲೂಕುಗಳ ಬಾಧಿತ ಗ್ರಾಮಗಳ ಸಾವಿರಾರು  ಗ್ರಾಮಸ್ಥರು ಭಾಗವಹಿಸಿದ್ದರು. ಪೊಲೀಸ್ ಬಂದೋ ಬಸ್ತ್ ಒದಗಿಸಲಾಗಿತ್ತು.

Post a Comment

أحدث أقدم