ಕುಕ್ಕೆ ಸುಬ್ರಹ್ಮಣ್ಯ ಚಂಪಾ ಷಷ್ಠಿ ಜಾತ್ರಾ ಮಹೋತ್ಸವದ ಸಂಭ್ರಮ-ನರಸಿಂಹ ಭಕ್ತವೃಂದದಿಂದ ರಥ ಬೀದಿ ಸ್ವಚ್ಛತಾ ಕಾರ್ಯಕ್ರಮ.

ಕುಕ್ಕೆ ಸುಬ್ರಮಣ್ಯ; ನ,29, ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಆಡಳಿತಅಧಿಕಾರಿ ಸುದರ್ಶನ ಜೋಯಿಸ್ ಅವರ ಮಾರ್ಗದರ್ಶನ ಹಾಗೂ ಮುಂದಾಳತ್ವದಲ್ಲಿ, ನರಸಿಂಹ ಭಕ್ತವೃಂದ ಹಲವಾರು ಸಾಮಾಜಿಕ,ಧಾರ್ಮಿಕ,ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು.


ಅದೇ ರೀತಿಯಲ್ಲಿ
ಕುಕ್ಕೆ ಸುಬ್ರಮಣ್ಯ ಶ್ರೀದೇವರ ಗೋಪುರದಿಂದ ಕುಮಾರಧಾರ ನದಿವರೆಗೆ ರಸ್ತೆಯಲ್ಲಿ ಬಿದ್ದ ಮಣ್ಣು ,ಕಸವನ್ನೂ ಗುಡಿಸಿ, ನೀರು ಹಾಕಿ ತೊಳೆದು ಸ್ವಚ್ಛತಾ ಕಾರ್ಯವನ್ನು ಸುಮಾರು 30 ಜನರ ತಂಡ ಹಲವಾರು ವರ್ಷಗಳಿಂದ ಶ್ರೀ ದೇವರ ಸೇವೆಯನ್ನು ಮಾಡುತ್ತಿದ್ದಾರೆ.
 ಇಂದು ಶ್ರೀ ದೇವರ ರಥಬೀದಿ ಇಂದ ಹಿಡಿದು ಕುಮಾರಧಾರ ವರೆಗೆ ಸ್ವಚ್ಛತಾ ಕಾರ್ಯವನ್ನು ನಡೆಸಿದ್ದಾರೆ. 
ಮುಂದಿನ ದಿನಗಳಲ್ಲಿ ಕುಮಾರಧಾರ ದಿಂದ ಶ್ರೀ ದೇವಳದವರಿಗೆ ಬೀದಿ ಮಡೆಸ್ನಾನ ನಡೆಯಲಿದ್ದು, ಈ ಸಂದರ್ಭದಲ್ಲಿ ಬೀದಿ ಮಡೆಸ್ನಾನ ಮಾಡುವ ಭಕ್ತರಿಗೆ ಯಾವುದೇ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಶ್ರೀ ದೇವರ ರಥಬೀದಿಯಿಂದ ಕುಮಾರಧಾರ ಅವರಿಗೆ ಸ್ವಚ್ಛತಾ ಕಾರ್ಯವನ್ನು ನಡೆಸಿದ್ದೇವೆ ಎಂದು ನರಸಿಂಹ ಭಕ್ತವೃಂದದ ಅಧ್ಯಕ್ಷರು ಮಾಧ್ಯಮಕ್ಕೆ ತಿಳಿಸಿದ್ದಾರೆ.




Post a Comment

Previous Post Next Post