ಯೂತ್ ಕ್ಲಬ್ ದೊಡ್ಡಕೊಪ್ಪದ ವತಿಯಿಂದ ಶ್ರೀ ಸಿದ್ದಿವಿನಾಯಕ ಸಭಾಭವನದಲ್ಲಿ 7ನೇ ವರ್ಷದ ಸಭಾ ಕಾರ್ಯಕ್ರಮ.

ಕಡಬ: ನಮ್ಮಲ್ಲಿ ಸ್ವ ಮೌಲ್ಯ ಮಾಪನದ ಅಗತ್ಯವಿದೆ,ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ಮೂಲಕ ಯುವ ಸಮುದಾಯ ಜವಾಬ್ದಾರಿಯುತ ಹೆಜ್ಹೆ ಇಡಬೇಕಾಗಿದೆ ಎಂದು ನಿವೃತ್ತ ಶಿಕ್ಷಕ ಸುಂದರ ಗೌಡ ಅಭಿಪ್ರಾಯ ಪಟ್ಟರು.
ಅವರು ಯೂತ್ ಕ್ಲಬ್ ದೊಡ್ಡಕೊಪ್ಪದ ವತಿಯಿಂದ ಶ್ರೀ ಸಿದ್ದಿವಿನಾಯಕ ಸಭಾಭವನದಲ್ಲಿ ನಡೆದ 7 ವರ್ಷದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದರು. ಊರಿನ ಅಭಿವೃದ್ಧಿ ಮತ್ತು ಪ್ರತಿಭೆಗೆ ಪ್ರೊತ್ಸಾಹ ನೀಡುವ ವೇದಿಕೆಯಾಗಿ ಸಂಘಟನೆ ಬಲಗೊಳ್ಳಬೇಕು,ನಮ್ಮಲ್ಲಿ ಬದ್ದತೆ ಇದ್ದಾಗ ಇಂತಹ ಬಲಿಷ್ಠ ಸಂಘ ಮುನ್ನಡೆಸಲು ಸಾಧ್ಯವೆಂದರು.
ಬಿಜೆಪಿ ಯುವ ಮೋರ್ಚಾ ಸುಳ್ಯ ಮಂಡಲ ಇದರ ಕಾರ್ಯದರ್ಶಿ ಆರ್. ದಿವಾಕರ ಕುಂಬಾರ ಅವರು ಮಾತಾನಾಡಿ, ಸಮುದಾಯಕ್ಕೆ ಬೆಳಕು ಚೆಲ್ಲುವ ಕಾರ್ಯದ ಮೂಲಕ ಸಂಘಟನೆ ಸಾಮಾಜಿಕವಾಗಿ ಗುರುತಿಸಿಕೊಂಡಿದೆ, ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು, ಸಮುದಾಯ ಮತ್ತು ಊರು ಅಭಿವೃದ್ಧಿಯಾಗಲು ಸಂಘಟನಾತ್ಮಕ ಪ್ರಯತ್ನ ಅಗತ್ಯ ವೆಂದರು.

ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಯೂತ್ ಕ್ಲಬ್ ದೊಡ್ಡಕೊಪ್ಪ ಇದರ ಅಧ್ಯಕ್ಷ ಪ್ರಕಾಶ ಪಿ ಅವರು ಮಾತಾನಾಡಿ ಉತ್ತಮ ಅಂಕಗಳನ್ನು ಗಳಿಸುವ ಮೂಲಕ ಸಮುದಾಯದ ಮಕ್ಕಳು ಮುಖ್ಯವಾಹಿನಿಗೆ ಬರಬೇಕು, ಶಿಕ್ಷಣಕ್ಕೆ ಹೆಚ್ವಿನ ಒತ್ತು ನೀಡಬೇಕೆಂದರು.


ಕುಂಬಾರ ಸೇವ ಸಂಘದ ಅಧ್ಯಕ್ಷ ಕುಂಞಣ್ಣ ಕುಂಬಾರ, ಶ್ರೀ ಸಿದ್ದಿವಿನಾಯಕ ಭಜನಾ ಮಂಡಳಿ ಆದ್ಯಕ್ಷ ದೇವಣ್ಣ ಜೆ , ಯೂತ್ ಕ್ಲಬ್ ನ ಗೌರವಾಧ್ಯಕ್ಷ ಲಿಂಗಪ್ಪ ಜೆ, ಬದಿಗುಂಡ ಮಾಡ ದೈವ ಸಮಿತಿ ಅಧ್ಯಕ್ಷ ಪದ್ಮಯ್ಯ ಕುಂಬಾರ ಮೊದಲಾದವರು ಸಮಯೋಚಿತವಾಗಿ ಮಾತನಾಡಿದರು.
ಸನ್ಮಾನ:ಈ ಕಾರ್ಯಕ್ರಮದಲ್ಲಿ ಆಪತ್ವಾಂಧವ ಈಶ್ವ‌ರ್ ಮಲ್ಪೆ ಅವರನ್ನು ಸನ್ಮಾನಿಸಲಾಯಿತು.
ಶ್ರೀಕಾಂತ ದೊಡ್ಡಕೊಪ್ಪ ಸ್ವಾಗತಿಸಿ, ಪ್ರಶಾಂತ್ ಪಟ್ನ ಧ್ಯವಾದವಿತ್ತರು.ಸಂತೋಷ್ ಪಟ್ನ ಕಾರ್ಯಕ್ರಮ ನಿರೂಪಿಸಿದರು .ಬಳಿಕ ಸಮುದಾಯ ಬಾಂಧವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Post a Comment

Previous Post Next Post