ಕುಕ್ಕೆ ಸುಬ್ರಹ್ಮಣ್ಯ; ರಾಜ್ಯರಸ್ತೆ ಮೇಲೆ ಹಾಗೂ ಫುಟ್ಪಾತ್ ಮೇಲೆ ನೂತನ ಕಟ್ಟಡ ನಿರ್ಮಾಣ ಮಾಡಲು ಬೇಕಾದ ಜಲ್ಲಿ, ಸಿಮೆಂಟ್, ಹಾಕಲು ಅವಕಾಶ ಇದ್ಯ?
ರಾಜ್ಯರಸ್ತೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಂಪರ್ಕ ಮಾಡುವ ಪ್ರಧಾನರಸ್ತೆ ಯಲ್ಲಿ ಯಾವುದೇ ತಡೆ ಬೇಲಿ ಅಥವಾ ಶೆಡ್ನೆಟ್ ಹಾಕದೆ ಕಾಮಗಾರಿಗೆ ಅವಕಾಶ ಇದ್ಯ?
ಒಂದು ಕಟ್ಟಡ ನಿರ್ಮಾಣ ಮಾಡುವಾಗ ಯಾವುದೇ ಬೆಂಕಿ ಅವಘಡಗಳು ಸಂಭವಿಸಿದ ಸಂದರ್ಭದಲ್ಲಿ ಹಾಗೂ ಇನ್ನಿತರ ತುರ್ತು ಸಂದರ್ಭ ಕಟ್ಟಡದ ಸುತ್ತ ಅಗ್ನಿಶಾಮಕ ವಾಹನ ಹೋಗಲು ಅವಕಾಶ ಬೇಡವೇ?
ಕಟ್ಟಡ ನಿರ್ಮಾಣಕ್ಕೆ ರಸ್ತೆಯನ್ನು , ಪುಟ್ಬಾತ್ ಅನ್ನು ಉಪಯೋಗ ಮಾಡಿದರೆ,
ಕುಕ್ಕೆ ದೇವಳದ ಮಾಸ್ತರ್ ಪ್ಲಾನ್ ಕಾಮಗಾರಿ ಯಲ್ಲಿ ನಿರ್ಮಾಣವಾದ ರಸ್ತೆ, ಫುಟ್ಬಾತ್,ಒಳಚರಂಡಿ ಈರೀತಿ ಸಾರ್ವಜನಿಕ ಸ್ವತ್ತುಗಳು ಹಾಳಾಗುವುದಿಲ್ಲವೇ?
ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಸುಬ್ರಹ್ಮಣ್ಯ ದೇವಳದ ಪಿಡಬ್ಲ್ಯೂಡಿ ಅಧಿಕಾರಿಗಳು ಈ ಬಗ್ಗೆ ಯಾಕೆ ಕ್ರಮ ಕೈಗೊಂಡಿಲ್ಲ? ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗಳಾಗುತ್ತಿದೆ.
Post a Comment