ನಾಟಿ ವೈದ್ಯರೊಬ್ಬರು ಗಂಭೀರ ಸ್ವರೂಪದ ಗಾಯವನ್ನು ಮೂರು ತಿಂಗಳ ಚಿಕಿತ್ಸೆ ಮೂಲಕ ಗುಣಪಡಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕಡಬ: ಮಹಿಳೆಯೊಬ್ಬರ ಕಾಲಿನ ಪಾದದಲ್ಲಿ ಮಾಂಸ ಕಿತ್ತು ಹೋದಂತೆ ಗಾಯವಾಗಿದ್ದು ಆಸ್ಪತ್ರೆಯ ವೈದ್ಯರೊಬ್ಬರು ಚಿಕಿತ್ಸೆ ಕಷ್ಟವೆಂದಿದ್ದರು. ಆದರೆ ನಾಟಿ ವೈದ್ಯರೊಬ್ಬರು ಗಂಭೀರ ಸ್ವರೂಪದ ಗಾಯವನ್ನು ಮೂರು ತಿಂಗಳ ಚಿಕಿತ್ಸೆ ಮೂಲಕ ಗುಣಪಡಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕುಂತೂರು ಗ್ರಾಮದ ಕಡೀರಡ್ಕ ಗಿರಿಜಾ ಎಂಬವರಿಗೆ ಕಾಲಿನ ಪಾದಕ್ಕೆ ಹಲವು ವರ್ಷದ ಹಿಂದೆ ಗಾಯವಾಗಿತ್ತು. ಇತ್ತೀಚೆಗೆ ಗುಳ್ಳೆ ಬಂದು ಕಾಲಿನ ಗಾಯ ಉಲ್ಬಣಗೊಂಡಿತ್ತು. ಸ್ಥಳೀಯವಾಗಿ ಹಳ್ಳಿ ಮದ್ದು ಮಾಡಿದರೂ, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರೂ ಕಡಿಮೆಯೇ ಆಗದ ಹಿನ್ನೆಲೆ ಖಿನ್ನತೆಗೆ ಒಳಗಾಗಿದ್ದರು. 
ಈ ಸಂದರ್ಭದಲ್ಲಿ ಭೀಮ್ ಆರ್ಮಿ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ರಾಘವ ಕಳಾರ ವರ ಮೂಲಕ ಪುತ್ತೂರಿನ ಹೆಸರಾಂತ ನಾಟಿ ವೈದ್ಯ ಎಂ. ನಾರ್ಣಪ್ಪ ಸಾಲ್ಯಾನ್ ಅವರನ್ನು ಭೇಟಿ ಮಾಡಿ ಚಿಕಿತ್ಸೆ ನೀಡುವ ಬಗ್ಗೆ ಚರ್ಚಿಸಿದ್ದರು.ಈ ವೇಳೆ ಮೂರು ತಿಂಗಳಲ್ಲಿ ಗಾಯ ಗುಣಪಡಿಸಿಕೊಡುವುದಾಗಿ ಭರವಸೆ ನೀಡಿದ್ದರು. ಅಂತೆಯೇ ಮೂರು ತಿಂಗಳನಾಟಿ ಚಿಕಿತ್ಸೆಯಿಂದ ನಡೆಯಲಾಗದ ಸ್ಥಿತಿಯಲ್ಲಿದ್ದ ಮಹಿಳೆಯ ಗಾಯ ವಾಸಿ ಮಾಡಿದ್ದಾರೆ.
ಭೀಮ್ ಆರ್ಮಿ ವತಿಯಿಂದ ಸನ್ಮಾನ: ಮಹಿಳೆಯ ಕಾಲಿನ ಗಾಯವನ್ನು ಗುಣಪಡಿಸಿದ ನಾಟಿ ವೈದ್ಯರ ಪರಿಣಾಮಕಾರಿ ಚಿಕಿತ್ಸೆಯ ಬಗ್ಗೆ ಸಂತಸಗೊಂಡು ಮಹಿಳೆಯ ಮನೆಯವರು ವೈದ್ಯರಿಗೆ ಅಭಿನಂದನೆ ತಿಳಿಸಲು ಇಚ್ಚಿಸಿದ್ದರು. ಅದರಂತೆ ಕಡಬ ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ತಾಲೂಕು ಅಧ್ಯಕ್ಷ ತಾರಾನಾಥ ಕಡಿರಡ್ಕ ನೇತೃತ್ವದ ತಂಡ ನಾಟಿ ವೈದ್ಯರ ಮನೆಗೆ ತೆರಳಿ ಸನ್ಮಾನ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆಯ ಉಪಾಧ್ಯಕ್ಷ ಸುರೇಶ ತೋಟಂತಿಲ, ಸಂಘಟನಾ ಕಾರ್ಯದರ್ಶಿ ಲೋಕೇಶ್ ಕಡಿರಡ್ಕ, ಸಮಾನ ಮನಸ್ಕರಾದ ಸಂದೀಪ್ ಪಾಂಜೋಡಿ, ಗೋಪಾಲ ಬೀಡು, ನಿತಿನ್ ಕಡಿರಡ್ಕ, ಪ್ರವೀಣ್, ಗಣೇಶ್ ಕಡಿರಡ್ಕ, ಗಿರಿಜಾ ಕಡಿರಡ್ಕ, ಶಿವಾನಂದ ಕಡಿರಡ್ಕ ಜೊತೆಗಿದ್ದರು.     
ನಾಟಿ ವೈದ್ಯ ಎಂ. ನಾರ್ಣಪ್ಪ ಸಾಲ್ಯಾನ್ ಅವರ ಪರಿಚಯ: ಮರಕ್ಕೂರು ದೇವಣ್ಣ ಪೂಜಾರಿ ಮತ್ತು ಚಂದ್ರಾವತಿಯವರ ಪುತ್ರರಾಗಿ ಕೃಷಿಕ ಕುಟುಂಬದಲ್ಲಿ ಜನಿಸಿದ ಇವರು ಉತ್ತಮ ಕೃಷಿಕರಾಗಿ ಗುರುತಿಸಿಕೊಂಡು ಬಳಿಕ ತಂದೆಯಿಂದ ವಂಶಪಾರಂಪರಿಕ ನಾಟಿ ವೈದ್ಯ ಪದ್ಧತಿಯನ್ನು ಬಳುವಳಿಯಾಗಿ ಪಡೆದುಕೊಂಡಿದ್ದಾರೆ. ಆನಡ್ಕ ಶಾಲೆಯಲ್ಲಿ ಪ್ರಾರ್ಥಮಿಕ ವಿದ್ಯಾಬ್ಯಾಸ ಪಡೆದು ಕೃಷಿ ಜೊತೆಗೆ ನಾಟಿ ವೈದ್ಯ ಪದ್ಧತಿಯನ್ನು ಮುಂದುವರಿಸಿ ಹಳ್ಳಿಯಲ್ಲಿ ಆಪತ್ತಿಗೆ ತುತ್ತಾದವರಿಗೆ ಚಿಕಿತ್ಸೆ ನೀಡಿ ಗುಣಪಡಿಸಿದ್ದಾರೆ. ವಿಪಜಂತು ಕಡಿತ, ಸರ್ಪಸುತ್ತು, ಕೆಂಪು ಸಂಬಂಧಿ ಕಾಯಿಲೆಗಳು, ಮಹಿಳೆಯರ ಮುಟ್ಟುದೋಷ , ಬಿಳಿಸೆರಗು ಮುಂತಾದ ಅನೇಕ ರೋಗಗಳಿಗೆ ಸಾಟಿವೈದ್ಯ ಪದ್ಧತಿ ಚಿಕಿತ್ಸೆ ನೀಡಿ ಗುಣಪಡಿಸುತ್ತಾರೆ.ಪತ್ನಿ ಶ್ರೀಮತಿ ರತ್ನಾವತಿ ಮತ್ತು ಇಬ್ಬರು ಗಂಡು ಮಕ್ಕಳೊಂದಿಗೆ ವಾಸವಾಗಿದ್ದಾರೆ.

Post a Comment

أحدث أقدم