ಕುಕ್ಕೆ ಸುಬ್ರಹ್ಮಣ್ಯ; ಕುಕ್ಕೆ ಶ್ರೀ ಸುಬ್ರಹ್ಮಣ್ಯ ಶ್ರೀ ಕ್ಷೇತ್ರ ಜಗತ್ಪ್ರಸಿದ್ಧ, ಅದರಲ್ಲೂ ಚಂಪಾ ಷಷ್ಠಿ ಮಹೋತ್ಸವ ಇನ್ನಷ್ಟು ಪ್ರಸಿದ್ಧ.
ಲಕ್ಷಾಂತರ ಭಕ್ತರು ಕುಕ್ಕೆಗೆ ಆಗಮಿಸಿದ್ದಾರೆ, ರಥೋತ್ಸವ ಏನು ಒಂದು ತೊಂದರೆಗಳಿಲ್ಲದೆ ಅದ್ದೂರಿಯಿಂದ ನಡೆದಿದೆ.
ಈ ಬ್ರಹ್ಮರಥೋತ್ಸವ ಇಷ್ಟೊಂದು ಅದ್ದೂರಿಯಿಂದ ವ್ಯವಸ್ಥಿತವಾಗಿ, ನಡೆಯಬೇಕು ಎಂದಾದರೆ ಅದರ ಹಿಂದೆ ನೂರಾರು ಮಂದಿ
ಬೇರೆ ಬೇರೆ ಇಲಾಖೆ ಅಧಿಕಾರಿಗಳ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಯೇಸುರಾಜ್,ದೇವಳದ
ಸಿಬ್ಬಂದಿಗಳ,ಭದ್ರತಾಸಿಬ್ಬಂದಿಗಳ,ನೌಕರರ,ಸ್ವಯಂಸೇವಕರ, ಜವಾಬ್ದಾರಿ, ಶ್ರಮ ಇದೆ.
ಇಂತಹ ದೊಡ್ಡ ಒಂದು ಅದ್ದೂರಿಯ ಬ್ರಹ್ಮರಥೋತ್ಸವ ಸಮಾರಂಭದಲ್ಲಿ ಪಾರ್ಕಿಂಗ್ ವಿಚಾರದಲ್ಲಿರಬಹುದು, ಭಕ್ತರರಕ್ಷಣೆ, ಸಾರ್ವಜನಿಕರ ಬೆಲೆ ಬಾಳುವ ಸ್ವತ್ತಿನ ರಕ್ಷಣೆ, ಇನ್ನಷ್ಟು ಬೇರೆ ಬೇರೆ ವಿಚಾರಗಳಲ್ಲಿ ಪೊಲೀಸ್ ಇಲಾಖೆ.ದೇವಳದ ಭದ್ರತಾ ಸಿಬ್ಬಂದಿಗಳ ಪಾತ್ರ ಬಹುಮುಖ್ಯವಾಗಿರುತ್ತದೆ.
ನಾವೆಲ್ಲರೂ ಸಂತೋಷ ಪಡುವಂತ ವಿಚಾರ ಏನೆಂದರೆ,
ಈ ಬಾರಿಯ ಕುಕ್ಕೆ ಸುಬ್ರಹ್ಮಣ್ಯ ಚಂಪಾ ಷಷ್ಠಿ ಮಹೋತ್ಸವ ,ಬ್ರಹ್ಮರಥೋತ್ಸವ, ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿದ್ದರು.
ಯಾವುದೇ ಕಳ್ಳತನ, ಪಿಕ್ ಪಾಕೆಟ್, ಸರಕಳ್ಳತನ, ಅಂಗಡಿ ಕಳ್ಳತನ, ವಾಹನ ಕಳ್ಳತನ, ಗಲಾಟೆಗಳು, ಗದ್ದಲಗಳು, ಬ್ರಹ್ಮರಥೋತ್ಸವ ಸಂದರ್ಭದಲ್ಲಿ ಕಾಲ್ತುಳಿತಗಳ ಅಂತ ಘಟನೆ, ನಡೆದಿಲ್ಲ ಎಂದು ಅಧಿಕಾರಿಗಳಿಂದ ಮಾಹಿತಿ ತಿಳಿದುಬಂದಿದೆ.
ಈ ಒಂದು ಸಮಾರಂಭವು ವ್ಯವಸ್ಥಿತ ರೀತಿಯಲ್ಲಿ ಕುಕ್ಕೆಗೆ ಬರುವಂತ ಭಗವತ್ಭಕ್ತರಿಗೆ ಯಾವುದೇ ರೀತಿಯ ತೊಂದರೆಗಳು ಆಗಬಾರದು ಎಂದು ಮಾನ್ಯ ಪುತ್ತೂರು ಉಪವಿಭಾಗಾಧಿಕಾರಿ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಅಧಿಕಾರಿ ಜುಬಿನ್ ಮಹೋಪಾತ್ರ ಅವರ ಆದೇಶದಂತೆ, ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ,ಎನ್, ಅವರ ಮಾರ್ಗದರ್ಶನದಲ್ಲಿ ಸುಳ್ಯ ಸರ್ಕಲ್ ಇನ್ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ್ ಹಾಗೂ ಸುಬ್ರಹ್ಮಣ್ಯ ಸಬ್ ಇನ್ಸ್ಪೆಕ್ಟರ್ ಕಾರ್ತಿಕ್ ಮುಂದಾಳತ್ವದಲ್ಲಿ ನಡೆದಿದೆ.
ರಥೋತ್ಸವ ಸಂದರ್ಭದಲ್ಲಿ 330 ಪೊಲೀಸ್ ಸಿಬ್ಬಂದಿ ಗಳನ್ನು ನಿಯೋಜನೆ ಮಾಡಲಾಗಿತ್ತು,2 ಇನ್ಸ್ಪೆಕ್ಟರ್,
10 ಜನ ಸಬ್ ಇನ್ಸ್ಪೆಕ್ಟರ್,16 ಎ ,ಎಸ್ ,ಐ,302 ಪೊಲೀಸ್ ಸಿಬ್ಬಂದಿಗಳು, 2,ಕೆ, ಎಸ್, ಅರ್, ಪಿ ತುಕಡಿ 100 ಮಂದಿ ಹೋಮ್ ಗಾರ್ಡ್ ನಿಯೋಜನೆ ಮಾಡಲಾಗಿತ್ತು, ವಿಶೇಷ ಅಂದರೆ ಉಡುಪಿ ಜಿಲ್ಲೆಯಿಂದ 70 ಪೋಲಿಸ್ ಸಿಬ್ಬಂದಿಗಳನ್ನು ಹಾಗೂ ಕಾರವಾರದಿಂದ 76 ಸಿಬ್ಬಂದಿಗಳನ್ನು ಬದ್ರತೆಗೆ ತರಿಸಲಾಗಿತ್ತು.
ಕುಕ್ಕೆಗೆ ಆಗಮಿಸುವ ಭಕ್ತರಿಗೆ ಯಾವುದೇ ಸಮಸ್ಯೆ ಆಗಬಾರದು ಬ್ರಹ್ಮರಥ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂದು ಮಾನ್ಯ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ,ಎನ್ ಅವರು ಖುದ್ದಾಗಿ ಉಪಸ್ಥಿತರಿದ್ದು ಎಲ್ಲಾ ಭದ್ರತೆಯ ಬಗ್ಗೆ ನೋಡಿಕೊಂಡಿದ್ದಾರೆ.
ಈ ಬಗ್ಗೆಯೂ ಸಾರ್ವಜನಿಕರು ಒಳ್ಳೆ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ;
ಪೊಲೀಸ್ ಇಲಾಖೆ ಹಾಗೂ ದೇವಳದ ಭದ್ರತಾ ಸಿಬ್ಬಂದಿಗಳ ನಿರಂತರ ಪರಿಶ್ರಮ ಹಾಗೂ ವ್ಯವಸ್ಥಿತ ರೀತಿಯಲ್ಲಿ ಜಾತ್ರಾ ಮಹೋತ್ಸವ ನಡೆಯುವಲ್ಲಿ ಬಹು ಮುಖ್ಯ ಪಾತ್ರ ವಹಿಸಿದ್ದಾರೆ .ಕುಕ್ಕೆಗೆ ಆಗಮಿಸಿದ ಎಲ್ಲಾ ಭಗವದ್ಭಕ್ತರು ಸಂತೋಷದಿಂದ ತೆರಳಿದ್ದಾರೆ. ಎಂದು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯ ಹರೀಶ ಇಂಜಾಡಿ,ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ವಿಶ್ವನಾಥ ನಡುತೋಟ ಹಾಗೂ
ಶ್ರೀ ದೇವರ ಭಕ್ತರು ಅಭಿನಂದನೆ ಸಲ್ಲಿಸಿದ್ದಾರೆ.
إرسال تعليق