ಸರಳ ವ್ಯಕ್ತಿತ್ವದ ಪ್ರಶಾಂತ್ ಸರಳಿಗೆ ಹವ್ಯಕ ಸಾಧಕ ರತ್ನದ ಕಿರೀಟ.
ನಾವು ಮಾಡುವ ಕೆಲಸ ಕಾರ್ಯದ ಮೇಲೆ ಅಥವಾ ಉದ್ಯೋಗ,ಅದು ಚಿಕ್ಕದಾಗಿರಲಿ, ದೊಡ್ಡದೇ ಆಗಿರಲಿ, ಮಾಡುವ ಉದ್ಯೋಗದಲ್ಲಿ ಶ್ರದ್ಧೆ, ಪ್ರಾಮಾಣಿಕತೆ, ಕೆಲಸ ಕಾರ್ಯದ ಮೇಲೆ ಪ್ರೀತಿ ಇದ್ದರೆ ನಾವು ಮಾಡುವಂತ ಯಾವುದೇ ಉದ್ಯೋಗ ಇರಬಹುದು, ಕಲೆ ,ಸಾಹಿತ್ಯ,ಕ್ರೀಡಾ ರಂಗ, ಅಲ್ಲದೆ ಅಡುಗೆ ಮಾಡುವ ಕಲೆ ಯಲ್ಲಿಯೂ ಸಾಧಿಸಬಹುದು,ಎಲ್ಲರ ಮೆಚ್ಚುಗೆಗೆ ಪಾತ್ರರಾಗಬಹುದು ಎಂದು ಇಲ್ಲೊಬ್ಬರು ಸಾಧಿಸಿ ತೋರಿಸಿದ್ದಾರೆ.ಅವರೇ ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮ. ಸರಳಿ ದಿ/ಮಹಾಬಲೇಶ್ವರ ಭಟ್, ಕಮಲಾವತಿ ದಂಪತಿಗಳ ಸುಪುತ್ರ.ಶ್ರೀ ಕೃಷ್ಣ ಪ್ರಶಾಂತ ಸರಳಿ.
ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಅದು ಅಲ್ಲದೆ ವಿಶ್ವ ಹವ್ಯಕ ಸಮ್ಮೇಳನದಲ್ಲಿ ನೀಡಲಾಗುವ “ಹವ್ಯಕ ಸಾಧಕರತ್ನ” ಪ್ರಶಸ್ತಿಗೆ ಪುರಸ್ಕೃತರಾಗಿದ್ದಾರೆ.
ಶ್ರೀ ಕೃಷ್ಣ ಪ್ರಶಾಂತ ಸರಳಿ ಅವರು ಪಾಕ ಪ್ರವೀಣರಾದ ರವಿ ಕುಂಠಿಣಿ ಹಾಗೂ ಕಿರಣ ಕುಂಠಿಣಿ ,ಅವರ ಶಿಷ್ಯ ರಾಗಿ ಸುಮಾರು 18 ವರ್ಷ ಅಡುಗೆ ಮಾಡುವ ಕಲೆಯನ್ನ ಕರಗತ ಮಾಡಿಕೊಂಡರು.
ಕುಕ್ಕೆ ಸುಬ್ರಹ್ಮಣ್ಯ ಶ್ರೀ ಕ್ಷೇತ್ರದಲ್ಲಿ ದೇವರ ಸೇವೆ;
ಕುಕ್ಕೆ ಸುಬ್ರಹ್ಮಣ್ಯ ಶ್ರೀ ದೇವಳದಲ್ಲಿ 2023ರ ಚಂಪಾ ಷಷ್ಠಿಮಹೋತ್ಸವದ ಸಂದರ್ಭದಲ್ಲಿ ಭಗವದ್ಭಕ್ತರಿಗೆ ದೇವಾಲದಿಂದ ನೀಡುವ ಆನ್ನಪ್ರಸಾದ ತಯಾರಿಸಲು ಪ್ರದಾನ ಅಡುಗೆ ತಯಕರಾಗಿ ತಮ್ಮ ಸಿಬ್ಬಂದಿಗಳೊಂದಿಗೆ ಸೇವೆ ಸಲ್ಲಿಸಿದ್ದಾರೆ ಹಾಗೂ 2024 ಕಳೆದ ಚಂಪಾಷಷ್ಠಿ ಸಂದರ್ಭದಲ್ಲಿ 15 ದಿನಗಳ ಅವಧಿಯಲ್ಲಿ ಶ್ರೀದೇವರ ಕೊಪ್ಪರಿಗೆ ನೈವೇದ್ಯ ತಯಾರುಮಾಡಿ ಶ್ರೀ ದೇವರ ಸೇವೆ ಸಲ್ಲಿಸಿದ್ದಾರೆ.
ಲಕ್ಷಾಂತರ ಭಗವದ್ಭಕ್ತರು ಪ್ರಸಾದ ಸ್ವೀಕರಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಡುಗೆ ಮಾಡುವುದರ ಜೊತೆಗೆ ಮೂವತ್ತಕ್ಕೂ
ಹೆಚ್ಚು ಜನರಿಗೆ ಅನ್ನದಾತರಾದ ಪ್ರಶಾಂತ್ ಸರಳಿ;
ಬೆಂಗಳೂರು ,ಅಂಜನಪುರ.ಎಂಬಲ್ಲಿ 2010 ನೇ ಇಸವಿಯಲ್ಲಿ “ಸರಳಿ ಕ್ಯಾಟರಿಂಗ್”ಸರ್ವಿಸಸ್.ಎಂಬ ಸಂಸ್ಥೆಯನ್ನು ತೆರೆದು 30ಕ್ಕು ಹೆಚ್ಚು ಜನರಿಗೆ ಉದ್ಯೋಗ ಅವಕಾಶವನ್ನು ಕಲ್ಪಿಸಿದ್ದಾರೆ.
ಪಾಕಶಾಸ್ತ್ರದಲ್ಲಿ ದಕ್ಷಿಣ ಭಾರತ ಹಾಗೂ ಉತ್ತರ ಭಾರತದ ಸಸ್ಯಾಹಾರಿ ಅಡಿಗೆ ಎಲ್ಲ ರೀತಿಯ ಸಿಹಿ ತಿಂಡಿಗಳು, ಎಣ್ಣೆ ಖಾದ್ಯಗಳು, ಭಕ್ಷ್ಯಗಳು,ಸಾಂಪ್ರದಾಯಿಕ ಊಟದಲ್ಲಿ ಬೇಕಾದ ಎಲ್ಲಾ ಬಗೆಯ ಪದಾರ್ಥಗಳನ್ನು ಮಾಡುವಲ್ಲಿ ಅತ್ಯುತ್ತಮ ಪರಿಣತಿ ಹೊಂದಿದ್ದಾರೆ.
ಊರಿನಲ್ಲು, ಬೆಂಗಳೂರಿನಲ್ಲೂ ಪ್ರಶಾಂತ್ ಅವರ ಅಡುಗೆಯನ್ನು ಮೆಚ್ಚಿಕೊಂಡ ಜನತೆ;
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸರಳಿ ಪ್ರಶಾಂತ ಅಡುಗೆ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು ಇದೀಗ 15 ವರ್ಷದಿಂದ ಬೆಂಗಳೂರಿನಲ್ಲೂ ಪ್ರಸಿದ್ದಿ ಹೊಂದಿದ್ದಾರೆ.
ಇವರ ಈ ಸಾಧನೆಗೆ ವಿಶ್ವ ಹವ್ಯಕ ಸಮ್ಮೇಳನದಲ್ಲಿ ನೀಡಲಾಗುವ “ಹವ್ಯಕ ಸಾಧಕರತ್ನ” ಪ್ರಶಸ್ತಿಗೆ ಪುರಸ್ಕೃತರಾಗಿದ್ದಾರೆ.
ಶ್ರೀ ಕೃಷ್ಣ ಪ್ರಶಾಂತ ಸರಳಿ ಅವರಿಗೆ ಸಹೋದ್ಯೋಗಿಗಳು ಬಂಧುಮಿತ್ರರು,ಮಾಧ್ಯಮದ ಮೂಲಕ ಶುಭಹಾರೈಸಿದ್ದಾರೆ.
إرسال تعليق