ರಾಷ್ಟ್ರೀಯ ರೈಫಲ್ಸ್ ಸ್ಪರ್ಧೆಯಲ್ಲಿ ಸುಬ್ರಹ್ಮಣ್ಯದ ಹಿಮಾಂಷು ಎಂ.ಎಸ್. ಚಾಂಪಿಯನ್.

ಸುಬ್ರಹ್ಮಣ್ಯ ಜ.20: ಇತ್ತೀಚೆಗೆ ಮಧ್ಯಪ್ರದೇಶದ ಭೂಪಾಲ್ ನಲ್ಲಿ ನಡೆದ 67ನೇ ರಾಷ್ಟ್ರೀಯ ರೈಫಲ್ಸ್ ವೈಯಕ್ತಿಕ ಶೂಟಿಂಗ್ ಸ್ಪರ್ಧೆಯಲ್ಲಿ ಸುಬ್ರಹ್ಮಣ್ಯ ಸಮೀಪದ ವೆಂಕಟಪುರದ ಹಿಮಾಂಷು ಎಂ.ಎಸ್. ಹುಡುಗರ ವಿಭಾಗದ ವೈಯಕ್ತಿಕ ಚಾಂಪಿಯನ್ಶಿಪ್ ನೊಂದಿಗೆ 22ನೇ ಸ್ಥಾನದಲ್ಲಿ ಶ್ರೇಷ್ಠ ಸಾಧನೆಯನ್ನು ಮಾಡಿರುತ್ತಾರೆ. ಇವರಿಗೆ ಪ್ರಥಮೇಶ್ ಅವರು ಕೋಚ್ ಆಗಿ ತರಬೇತಿ ನೀಡಿರುವರು. ಇದಲ್ಲದೆ ಇವರು ಕರ್ನಾಟಕ ರಾಜ್ಯ ರೈಫಲ್ಸ್ ಅಸೋಸಿಯೇಷನ್ ವತಿಯಿಂದ ಕೇರಳದ ತಿರುವನಂತಪುರ ಹಾಗೂ ಗೋವಾದಲ್ಲಿ ನಡೆದ ಏರ್ ರೈಫಲ್ಸ್ ಸ್ಪರ್ಧೆಯಲ್ಲಿ ಕೂಡ ಭಾಗವಹಿಸಿರುತ್ತಾರೆ. ಬೆಂಗಳೂರಿನ ಚಿಕ್ಕಬಾಣಾವರ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ 8ನೇ ತರಗತಿ ಓದುತ್ತಿರುವ ಇವರು ಬೆಂಗಳೂರಿನ ಕಂಪನಿಯಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ಆಗಿರುವ ಕುಳಕುಂದ ಸಮೀಪದ ವೆಂಕಟಪುರದ ಶಿವಪ್ರಸಾದ್ -ವಿಜಯಲಕ್ಷ್ಮಿ ದಂಪತಿಯ ಪುತ್ರ ಆಗಿರುತ್ತಾರೆ.

Post a Comment

أحدث أقدم