ಸುಬ್ರಹ್ಮಣ್ಯ ಜ.21: ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ವತಿಯಿಂದ ಲಯನ್ಸ್ ಜಿಲ್ಲೆ317 ರ ಜಿಲ್ಲಾ ಗವರ್ನರ್ ಅವರ ಅಧಿಕೃತ ಭೇಟಿಯ ಸಂದರ್ಭದಲ್ಲಿ ಗ್ರಾಮೀಣ ಪರಿಸರದಲ್ಲಿ ಸಾಧನೆಯನ್ನು ಮಾಡಿದ ಸಾಧಕರನ್ನು ಸೋಮವಾರ ಏನಕ್ಕಲ್ಲ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ಸನ್ಮಾನಿಸಲಾಯಿತು.
ಯೋಗದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಯನ್ನು ಮಾಡಿದ ಕುಮಾರಸ್ವಾಮಿ ವಿದ್ಯಾಲಯದ ಎಂಟನೇ ತರಗತಿಯ ವಿದ್ಯಾರ್ಥಿ ಗೌರಿತ ರಾಜೇಶ್ವರಿ, ಗ್ರಾಮೀಣ ವೈದ್ಯರಾಗಿ ಹಾವು ಕಡಿತ ಹಾಗೂ ಇನ್ನಿತರ ಗಾಯಗಳಿಗೆ ಮತ್ತು ಅನಾರೋಗ್ಯಗಳಿಗೆ ಔಷಧಿಯನ್ನು ನೀಡುತ್ತಾ ಬಂದಿದ್ದ ನಾಗೇಶ್ ಕೆಂಚಮ್ಮ ನೆಕ್ರಾಜ ,ಸುಬ್ರಹ್ಮಣ್ಯದಲ್ಲಿ ರಥ ಕಟ್ಟುವ ಕಾಯಕದಲ್ಲಿ ಕಳೆದ 35 ವರ್ಷಗಳಿಂದ ನಿರಂತರವಾಗಿ ದುಡಿಯುತ್ತಿರುವ ತನಿಯಪ್ಪ ಕೋಡಿಕಜ, ಹಾಗೂ ರಥದ ಸಾಮಗ್ರಿಗಳು ಹಾಗೂ ಇನ್ನಿತರ ಸಾಮಗ್ರಿಗಳನ್ನು ಸ್ವತಃ ನೀಡುತ್ತಾ ಬಂದಿರುವ ವಿಠಲ ಮೂಲ್ಯ ಅವರುಗಳನ್ನ ಲಯನ್ಸ್ ಜಿಲ್ಲೆ 317ರ ಜಿಲ್ಲಾ ಗವರ್ನರ್ ಭಾರತಿ ಬಿ. ಎಂ. ಅವರು ಶಾಲು ಹೊದಿಸಿ ಸ್ಮರಣಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ರಾಜೇಶ ಎನ್.ಎಸ್ .ಲಯನ್ಸ್ ಪ್ರಾಂತೀಯ ಅಧ್ಯಕ್ಷ ಗಂಗಾಧರ ರೈ ,ವಲಯ ಅಧ್ಯಕ್ಷ ಪ್ರೊ ರಂಗಯ್ಯ ಶೆಟ್ಟಿಗಾರ್, ನಿಕಟ ಪೂರ್ವ ಅಧ್ಯಕ್ಷ ರಾಮಚಂದ್ರ ಪಳಂಗಾಯ, ಕಾರ್ಯದರ್ಶಿ ಕೃಷ್ಣ ಕುಮಾರ ಬಾಳುಗೋಡು, ಖಜಾಂಜಿ ಮೋಹನ್ದಾಸ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು
Post a Comment