ಕುಕ್ಕೆ ಸುಬ್ರಮಣ್ಯ; ಗೋವುಗಳನ್ನು ದೇವರೆಂದು ಹಿಂದೂ ಸಂಪ್ರದಾಯದಲ್ಲಿ ಭಕ್ತಿಯಿಂದ ಆರಾಧನೆ ಮಾಡುತ್ತೇವೆ. ನಮ್ಮ ಉದ್ದೇಶ ಗೋವುಗಳಿಗೆ ಹಿಂಸೆ ಮಾಡಬೇಕು ಅಥವಾ ಅದರ ಸ್ವತಂತ್ರ್ಯ ಕಸಿದು ಕೊಳ್ಳಬೇಕು ಎಂಬುದಲ್ಲ.
ಕುಕ್ಕೆ ಸುಬ್ರಹ್ಮಣ್ಯ ರಥ ಬೀದಿಯಲ್ಲಿ ಹಾಗೂ ಸುಬ್ರಹ್ಮಣ್ಯ ಪೇಟೆಯಲ್ಲಿ ಸಾರ್ವಜನಿಕರಿಗೆ ಕುಕ್ಕೆಗೆ ಬರುವ ಭಕ್ತರಿಗೆ, ಪುಟ್ಟ ಮಕ್ಕಳಿಗೆ ,ವೃದ್ಧರಿಗೆ ಯಾರಿಗೂ ಗೋವುಗಳಿಂದಯಾವುದೇ ರೀತಿಯಲ್ಲಿ ಹಾನಿ ಹಾಗೂ ಯಾವುದೇ ಪ್ರಾಣಪಾಯ,ಸಂಭವಿಸಬಾರದು ಎಂಬುದು ನಮ್ಮ ಉದ್ದೇಶ.
ಇದೀಗ ರಥ ಬೀದಿ ಗೋಶಾಲೆ ಯಂತಾಗಿದೆ;
ಹೌದು ರಥ ಬೀದಿ ತುಂಬೆಲ್ಲ ಯಾವುದೇ ವಾರಿಸುದಾರರು ಇಲ್ಲಾದ ಗೋವುಗಳು ಆಹಾರ ಅರಸಿ ಬರುತ್ತವೆ,
ಈ ಹೋರಿಗಳು ಗುದ್ದಾಟಶುರು ಮಾಡಿಕೊಳ್ಳುತ್ತೇವೆ.
ಭಕ್ತರಿಗೆ ಹಾನಿ ಮಾಡುವ ಸಾಧ್ಯತೆ;
ರಥಬೀದಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ ಸಂದರ್ಭದಲ್ಲಿ ಬಲಶಾಲಿಯಾದ ಈ ಹೋರಿಗಳ ಗುದ್ದಾಟ ನಡೆದರೆ,ಗುಂಪಾಗಿ ದಾಳಿ ಮಾಡಿದರೆ ಪುಟ್ಟ ಮಕ್ಕಳಿಗೆ, ವೃದ್ಧರಿಗೆ, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬಂದ ಭಕ್ತರಿಗೆ,ಪ್ರಾಣಪಾಯ ಸಂಭವಿಸುವ ಸಾಧ್ಯತೆಗಳಿದೆ.
ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಗಳಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾ ಷಷ್ಠಿ ಜಾತ್ರೆ ಮೊದಲು ಈ ಗೋವುಳನ್ನು ಸ್ಥಳಾಂತರ ಮಾಡುವ ಬಗ್ಗೆ ಪಂಚಾಯತ್ ಸಭೆಯಲ್ಲಿ ಚರ್ಚೆ ನಡೆದಿದೆ
ಇನ್ನೂ ಸ್ಥಳಾಂತರ ಮಾಡಿಲ್ಲ.
ಬೀದಿನಾಯಿಗಳನ್ನು, ವಾರಿಸುದಾರರಿಲ್ಲದ ಬೀದಿ ಹಸುಗಳನ್ನು ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸ್ಥಳಾಂತರ ಮಾಡಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವ ಭಕ್ತರಿಗೆ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಹಾಗೂ ಯಾವುದೇ ದುರ್ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಆಶಯ.
Post a Comment