ಕುಕ್ಕೆ ಸುಬ್ರಮಣ್ಯ ಮುಖ್ಯರಸ್ತೆಯನ್ನೇ ಬಸ್ ನಿಲ್ದಾಣ ಮಾಡಿದ ಸರ್ಕಾರಿ ಬಸ್ಸುಗಳು.

ಕುಕ್ಕೆ ಸುಬ್ರಹ್ಮಣ್ಯ; ಮಾನ್ಯ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ, ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಆಡಳಿತ ಅಧಿಕಾರಿಗಳು, ಸುಬ್ರಹ್ಮಣ್ಯ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ,ಗ್ರಾಮ ಪಂಚಾಯಿತಿ ಹೀಗೆ ಎಲ್ಲರೂ ಸೇರಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬರುವ ಭಕ್ತರಿಗೆ ವಾಹನ ಸವಾರರಿಗೆ ಯಾವುದೇ ರೀತಿಯ ಸಮಸ್ಯೆಗಳಾಗಬಾರದು ಎಂಬ ದೃಷ್ಟಿಯಲ್ಲಿ ಕುಕ್ಕೆ ಸುಬ್ರಮಣ್ಯ ಕಾಶಿ ಕಟ್ಟೆಯಿಂದ ದೇವಸ್ಥಾನಕ್ಕೆ ಸಂಪರ್ಕಿಸುವ ಪ್ರಧಾನ ರಸ್ತೆ ಏಕ ಮುಖ ಸಂಚಾರ ನಿಯಮವನ್ನ ಮಾಡಿದ್ದಾರೆ. 
ಈ ಒಂದು ನಿಯಮಕ್ಕೆ ಸಾರ್ವಜನಿಕರಿಂದ ವಾಹನ ಸವಾರರಿಂದ ಮೆಚ್ಚುಗೆ ವ್ಯಕ್ತವಾಗಿದೆ. 

ದೊಡ್ಡ ಸಮಸ್ಯೆ ಇಲ್ಲಿದೆ;
ಇದೀಗ ದೊಡ್ಡ ತಲೆನೋವಾಗಿ ಪರಿಣಮಿಸಿರುವುದು ಸರಕಾರಿ ಬಸ್ ನಿಲ್ದಾಣ, ಈ ಸರಕಾರಿ ಬಸ್ ನಿಲ್ದಾಣಕ್ಕೆ ಬರುವ ಬಸ್ ಗಳು ರಸ್ತೆಯಲ್ಲಿ ಪಾರ್ಕ್ ಮಾಡೋದು ರಸ್ತೆಯಲ್ಲಿ ವಾಹನವನ್ನು ಹಿಂದೆಮುಂದೆ ತೆಗೆಯುವುದು, ಇದರಿಂದ ವಾಹನ ಸವಾರರಿಗೆ ಅದೇ ಬಸ್ಸಿನಲ್ಲಿ ಬಂದು ಇಳಿದು ದೇವಸ್ಥಾನಕ್ಕೆ ಹೋಗುವ ಭಕ್ತರಿಗೆ ತೀರ ಸಮಸ್ಯೆ ಉಂಟಾಗಿದೆ. 

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಂಪರ್ಕಿಸುವ ಮುಖ್ಯರಸ್ತೆ ಇದಾಗಿದ್ದು ಜೊತೆಗೆ ಸುಳ್ಯ ಭಾಗಕ್ಕೆ ಸಂಚರಿಸುವ ರಾಜ್ಯ ರಸ್ತೆಯು ಇದೇ ಆಗಿದೆ ಆದ್ದರಿಂದ ಎಲ್ಲ ವಾಹನಗಳು ಇದೇ ರಸ್ತೆಯನ್ನ ಅವಲಂಬಿಸಿಕೊಂಡು ಸುಳ್ಯ ಭಾಗಕ್ಕೆ ಮಡಿಕೇರಿ ಭಾಗಕ್ಕೆ ಸಂಚರಿಸಬೇಕಾಗಿದೆ.
ಈ ಸರಕಾರಿ ಬಸ್ಸು ನಿಲ್ದಾಣಕ್ಕೆ ಬರುವ ಬಸ್ಸುಗಳು ರಸ್ತೆಯಲ್ಲಿ  ಬಸ್ಸುಗಳನ್ನು ನಿಲ್ಲಿಸುತ್ತಾರೆ. 
ಪ್ರಧಾನ ರಸ್ತೆಯನ್ನ ಬಳಸಿಕೊಂಡು ವಾಹನವನ್ನು ಹಿಂದಕ್ಕೆ ತೆಗೆದು ಪಾರ್ಕ್ ಮಾಡುತ್ತಾರೆ. 
ಈ ಸಮಸ್ಯೆಯಿಂದಾಗಿ ಉಳಿದ ವಾಹನ ಸವಾರರಿಗೆ ನಡೆದುಕೊಂಡು ಹೋಗುವ ಭಕ್ತರಿಗೆ ತೀರ ಸಮಸ್ಯೆ ಉಂಟಾಗಿದೆ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ತಕ್ಷಣ ಪರಿಹಾರ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Post a Comment

Previous Post Next Post