ಕುಕ್ಕೆಯಲ್ಲಿ ಲೋಕಕಲ್ಯಾಣಾರ್ಥವಾಗಿ ಶಿವಸಹಸ್ರನಾಮ ಪಾರಾಯಣ ಹಾಗೂ ಯಜ್ಞ .

ಸುಬ್ರಹ್ಮಣ್ಯ: ಶ್ರೀನಿಕೇತನ ಟ್ರಸ್ಟ್ (ರಿ.) ಸುಬ್ರಹ್ಮಣ್ಯ ಮತ್ತು ಶ್ರೀನಿಕೇತನ 
ವಸ್ತುಸಂಗ್ರಹಾಲಯ ಮತ್ತು ಕೆಳದಿ ರಾಣಿ ಚೆನ್ನಮ್ಮಾಜಿ ಅಧ್ಯಯನ ಪೀಠ 
ಕುಕ್ಕೆ ಸುಬ್ರಹ್ಮಣ್ಯ ಇದರ ವತಿಯಿಂದ ಲೋಕಕಲ್ಯಾಣಾರ್ಥವಾಗಿ ವಸಿಷ್ಠ ಕೃತ ಸಕಲ 
ರೋಗ ಹರ,ದಾರಿದ್ರನಾಶಕ ಶಿವಸ್ತುತಿ ಲೇಖನ ಮತ್ತು ಶಿವಸಹಸ್ರನಾಮ 
ಪಾರಾಯಣ ಯಜ್ಞ ನೆರವೇರಲಿದೆ.
ಲೋಕ ಕಲ್ಯಾಣಾರ್ಥವಾಗಿ ರಾಷ್ಟçದಲ್ಲೇ ಇದೇ 
ಮೊದಲ ಬಾರಿಗೆ ಯಜ್ಞ ನೆರವೇರಲಿದೆ2025ರ ಶಿವರಾತ್ರಿಯಿಂದ 2026 ಶಿವರಾತ್ರಿ ತನಕ 
ನಿರಂತರವಾಗಿ ಒಂದು ವರ್ಷಗಳ ಕಾಲ ದಾರಿದ್ರನಾಶಕ ಶಿವಸ್ತುತಿ ಲೇಖನ ಹಾಗೂ 
ಶಿವಸಹಸ್ರನಾಮ ಪಾರಾಯಣ ಯಜ್ಞ ಕಾರ್ಯಕ್ರಮ ಸುಬ್ರಹ್ಮಣ್ಯದಲ್ಲಿ ನಡೆಯಲಿದೆ 
ಎಂದು ಸುಬ್ರಹ್ಮಣ್ಯ ಮಠದ ಶ್ರೀ ಡಾ.ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿಗಳು 
ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಶಿವ ಭಕ್ತರು ಬರೆದು ಕೊಡುವ ಶಿವಸ್ತುತಿಯನ್ನು ಶಿವಸಹಸ್ರನಾಮ 
ಮಹಾಯಾಗದ ಹೋಮಕ್ಕೆ ಅರ್ಪಿಸಲಾಗುವುದು. ಈ ಕಾರ್ಯಕ್ರಮದಲ್ಲಿ 
ಭಾಗವಹಿಸುವವರು ಹೋಮ ಕಾಣಿಕೆ ರೂ.151 ಪಾವತಿಸಿ ಹೆಸರನ್ನು 
ನೊಂದಾಯಿಸಿಕೊಳ್ಳಬೇಕು. ಹೋಮ ನಡೆಯುವ ಸ್ಥಳ, ಸಮಯ, ದಿನಾಂಕ 
ಹಾಗೂ ಶಿವಸ್ತುತಿ ಸ್ತೋತ್ರ, ಶಿವಸಹಸ್ರನಾಮ ಸ್ತೋತ್ರ, ಇತರ ವಿವರಗಳನ್ನು 
ಶೀಘ್ರ ತಿಳಿಸಲಾಗುವುದು ಎಂದರು.
ಸಂಕಷ್ಟ ನಿವಾರಣೆಗೆ,
ಕೊರೊನಾ ಎಂಬ ಮಹಾಮಾರಿಯಿಂದ ಗುಣಮುಖರಾಗುವಷ್ಟರಲ್ಲೇ ಅಂತಹುದೇ 
ಮತ್ತೊಂದು ರೋಗವನ್ನು ಎದುರಿಸಬೇಕಾಗಿ ಬಂದಿದೆ. ಶಿವಸ್ತುತಿ ಲೇಖನ ಮತ್ತು 
ಶಿವಸಹಸ್ರನಾಮ ಪಾರಾಯಣದಿಂದ ಸಕಲ ರೋಗ ಪರಿಹಾರದ ಜೊತೆಗೆ ಮಾನವನಿಗೆ 
ಬರಬಹುದಾದ ಅನೇಕ ರೀತಿಯ ಕಷ್ಟ ಕಾರ್ಪಣ್ಯಗಳಿಂದ ಪರಿಹಾರ ದೊರೆಯುವುದು 
ನಿಶ್ಚಿತ. ಶಿವ ಎಲ್ಲರ ಮನೋನಿಯಾಮಕ ಎಂಬುದಾಗಿ ಅನೇಕ ಶಾಸ್ತ್ರಗಳಲ್ಲಿ ಮತ್ತು 
ಪುರಾಣಗಳಲ್ಲಿ ಹೇಳಲಾಗಿದೆ.ಆದುದರಿಂದ ಶಿವಸ್ತುತಿ ಲೇಖನ ಮತ್ತು 
ಶಿವಸಹಸ್ರನಾಮ ಸ್ಮರಣೆಯಲ್ಲಿ ಸರ್ವರೂ ಭಾಗವಹಿಸಿ ಮಹಾಶಿವನ ಕೃಪೆಗೆ 
ಪಾತ್ರರಾಗಬೇಕು. ನಮ್ಮ ರಾಷ್ಟçಕ್ಕೆ ಒಳ್ಳೆಯದಾಗಲಿ ಲೋಕ ಕಲ್ಯಾಣವಾಗಲಿ ಎಂಬ 
ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಎಂದು ಶ್ರೀಗಳು 
ನುಡಿದರು.
ಐತಿಹಾಸಿಕ ಸಮ್ಮೇಳನ:
ಶ್ರೀನಿಕೇತನ ವಸ್ತುಸಂಗ್ರಹಾಲಯ ಮತ್ತು ಕೆಳದಿ ರಾಣಿ ಚೆನ್ನಮ್ಮಾಜಿ 
ಅಧ್ಯಯನ ಪೀಠ ಕುಕ್ಕೆ ಸುಬ್ರಹ್ಮಣ್ಯ ಇದರ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ 
ಕೆಳದಿ ಅರಸರ ಕೊಡುಗೆ ಎಂಬ ವಿಷಯವಾಗಿ ಎರಡು ದಿನಗಳ ರಾಜ್ಯ ಮಟ್ಟದ 
ಐತಿಹಾಸಿಕ ಸಮ್ಮೇಳನ ನಡೆಯಲಿದೆ.ಸಮ್ಮೇಳನದಲ್ಲಿ ರಾಜ್ಯಾದ್ಯಂತ ದಿಂದ
ವಿದ್ವಾಂಸರು, ಇತಿಹಾಸಕಾರರು ಭಾಗವಹಿಸಲಿದ್ದಾರೆ.ಫೆ.22,23ರಂದು ನಡೆಯುವ 
ಸಮ್ಮೇಳನಕ್ಕೆ ಈಗಾಗಲೇ 30ಕ್ಕೂ ಅಧಿಕ ವಿದ್ವಾಂಸರು ಹೆಸರನ್ನು
ನೊಂದಾಯಿಸಿದ್ದು ಮುಂದೆ ಇತರರು ನೋಂದಾಣಿ ಮಾಡಲಿದ್ದಾರೆ ಎಂದು ಶ್ರೀಗಳು 
ಹೇಳಿದರು.
ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ 
ಸ್ವಾಮೀಜಿಗಳು ಕಾರ್ಯಕ್ರಮದ ಆಮಂತ್ರಣವನ್ನು ಬಿಡುಗಡೆಗೊಳಿಸಿದರು.ಈ 
ಸಂದರ್ಭ ಶ್ರೀನಿಕೇತನ ವಸ್ತುಸಂಗ್ರಹಾಲಯ ಮತ್ತು ಕೆಳದಿ ರಾಣಿ ಚೆನ್ನಮ್ಮಾಜಿ 
ಅಧ್ಯಯನ ಪೀಠದ ಸಂಸ್ಥಾಪಕ ನಿರ್ದೇಶಕ ಡಾ.ಜಿ.ವಿ.ಕಲ್ಲಾಪುರ ಮತ್ತು 
ಸಂಶೋಧನಾ ವಿದ್ಯಾರ್ಥಿ ಕಾರ್ತಿಕ್ ಶಗ್ರಿತ್ತಾಯ ಉಪಸ್ಥಿತರಿದ್ದರು.

Post a Comment

أحدث أقدم