ಬಿಳಿನೆಲೆ- ಕೈಕಂಬ ಶಾಲಾ ವಿದ್ಯಾರ್ಥಿಗಳಿಗೆ ಗಾಂಧಾರಿ ವಿದ್ಯೆಯ ತರಬೇತಿ ಶಿಬಿರ.

ಸುಬ್ರಹ್ಮಣ್ಯ ಫೆ.28: ಕಣ್ಣುಗಳ ಸಹಾಯವಿಲ್ಲದೆ ಬಣ್ಣ, ಚಿತ್ರ ,ವಸ್ತು, ಬರಹ ಇತ್ಯಾದಿಗಳನ್ನ ಗುರುತಿಸುವ ವಿಶೇಷ ಗಾಂಧಾರಿ ವಿದ್ಯಾ ತರಬೇತಿ ಶಿಬಿರವು ಬಿಳಿನೆಲೆ ಕೈಕಂಬ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಯೋಗ ಧ್ಯಾನ ಸಂಸ್ಕಾರ ಮತ್ತು ಶ್ರದ್ಧಾ ಫಲಗಳಿಂದ ತಮ್ಮ ಮನು ಶಕ್ತಿಯನ್ನು ಉದ್ಧಿಪನಗೊಳಿಸುವ ಈ ಪ್ರಾ ಶಿಕ್ಷಣವನ್ನು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಿ ತಮ್ಮ ವಿಶಿಷ್ಟ ಕಾಳಜಿಯನ್ನ ಮೆರೆದವರು ಮಂಗಳೂರಿನ ಶ್ರೀ ಗೋಕುಲ ಧಾಮ ಹಾಗೂ ಮೈಂಡ್ ಮಿರಕಲ್ಸ್ ಇದರ ಮುಖ್ಯಸ್ಥರಾದ ರೂಪಶ್ರೀ .ಜಿ .ಗುದಂಡ ಮತ್ತು ಅವರಿಗೆ ಸಾತ್ ನೀಡಿದವರು ಶ್ರೀ ಕೃಷ್ಣರಾಜ ಕೊಟ್ಟಾರ.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ನಿವೃತ್ತ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಅತ್ಯಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ತರಬೇತಿಗೆ ಚಾಲನೆ ನೀಡಿದರು.ಶಾಲಾ ಮೇಲುಸ್ತುವಾರಿ ಹಾಗೂ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನವೀನ ನಡು ತೋಟ ಸಭಾಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ಪವಿತ್ರ ಎ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಶಾಲಾ ಮೇಲುಸ್ತುವಾರಿ ಹಾಗೂ ಅಭಿವೃದ್ಧಿ ಸಮಿತಿ ಸದಸ್ಯರುಗಳು, ಪೋಷಕರು, ಶಿಕ್ಷಕ ವೃಂದದವರು, ಹಾಗೂ ಅಕ್ಷರ ದಾಸೋಹ ಸಿಬ್ಬಂದಿ ವರ್ಗದವರು ಹಾಜರಿದ್ದರು.

Post a Comment

Previous Post Next Post