ಪುಣ್ಯ ಕುಮಾರಧಾರ ನದಿ ಒಡಲಿಗೆ -ಕಲುಷಿತ ರಾಸಾಯನಿಕ ಯುಕ್ತ ನೀರು..! ಹೇಳುವರಿಲ್ಲ ಕೇಳುವವರಿಲ್ಲ! ಸಮಸ್ಯೆಗೆ ಎಂದು ಮುಕ್ತಿ?


ಕುಕ್ಕೆ ಸುಬ್ರಹ್ಮಣ್ಯ ಖಾಸಗಿವಸತಿ ಗೃಹ 
ಗಳಿಂದ ಒಳಚರಂಡಿಯಲ್ಲಿ ಹರಿದು ಬರುತ್ತಿದೆ ರಾಸಾಯನಿಕಯುಕ್ತ ಕಲುಹಿತ ನೀರು ಹೇಳುವವರಿಲ್ಲ ಕೇಳುವವರಿಲ್ಲ ಎಂಬಂತಾಗಿದೆ.. !!

ಕುಕ್ಕೆ ಸುಬ್ರಹ್ಮಣ್ಯ
; ಮಾ,01,ಶ್ರೀ ಕ್ಷೇತ್ರದಲ್ಲಿ ದಿನ ಕಳೆದಂತೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ, ಅದೇ ರೀತಿ ಈ ಭಕ್ತರಿಗೆ ಉಳಿದುಕೊಳ್ಳಲು ವ್ಯವಸ್ಥೆಗೆ ವಸತಿಗೃಹಗಳು ದಿನ ಕಳೆದಂತೆ ತಲೆಯೆತ್ತಿವೆ.ವ್ಯವಸ್ಥೆಗಳು ಆಗಬೇಕು ಭಕ್ತರಿಗೆ ಅನುಕೂಲವಾಗಬೇಕು ಆದರೆ ವಸತಿ ಗೃಹ 
ಗಳಿಂದ ಪವಿತ್ರ ದರ್ಪಣ ತೀರ್ಥ ನದಿಗೆ ಕೊಳಚೆ ನೀರು, ತ್ಯಾಜ್ಯ ವಸ್ತುಗಳನ್ನು, ವಸತಿಗೃಹ ಗಳಲ್ಲಿ  ಉಪಯೋಗಿಸಿದ ರಾಸಾಯನಿಕ ಯುಕ್ತ ನೀರನ್ನು ಬಿಡುವುದು ಎಷ್ಟು ಸರಿ.?
ಕುಕ್ಕೆ ಸುಬ್ರಹ್ಮಣ್ಯ ಕಾಶಿ ಕಟ್ಟೆ ಬಳಿ ಇರುವ ಖಾಸಗಿ ವಸತಿ ಗೃಹ ಗಳಿಂದ ಕೊಳಚೆ ನೀರು, ರಾಸಾಯನಿಕ ಮಿಶ್ರಿತ ನೀರು ನಮ್ಮೆಲ್ಲರು ಭಕ್ತಿಇಂದ ಪೂಜಿಸುವ ಪವಿತ್ರ ತೀರ್ಥ ದರ್ಪಣ ನದಿಗೆ ಸೇರುತಿದೆ. ಅದೇ ಕೊಳಚೆ ನೀರು ಸ್ವಲ್ಪ ಮುಂದೆ ಹೋಗಿ ಕುಮಾರಧಾರ ನದಿಯ ಒಡಲಿಗೆ ಸೇರುತ್ತದೆ.



ದರ್ಪಣ ನದಿಯಲ್ಲಿ ಹರಿದ ಒಳಚರಂಡಿಯ ಈ ಕಲುಷಿತ ನೀರಿನಲ್ಲಿ ಅದೆಷ್ಟೋ ಜಲಚರಗಳು ಸತ್ತು ಹೋಗುತ್ತವೆ, ಕುಮಾರಧಾರ ನದಿಯ ನೀರನ್ನು ಅದೆಷ್ಟೋ ಜನರು ಕುಡಿಯುತ್ತಾರೆ, ಈ ಪವಿತ್ರ ತೀರ್ಥವನ್ನು ಕಲುಷಿತ ಮಾಡುವಂತಹ ಈ ವಸತಿಗೃಹಗಳ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ? ಶುಚಿತ್ವದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಲ್ಲವೇ?
ಹೇಳೋರಿಲ್ಲ- ಹೇಳುವವರಿಲ್ಲ ಎಂಬಂತಾಗಿದೆ ಕುಕ್ಕೆ ಸುಬ್ರಮಣ್ಯದ ಈ ಒಳಚರಂಡಿ ವ್ಯವಸ್ಥೆಗಳು.
ಗ್ರಾಮ ಪಂಚಾಯಿತಿನ ಕೂಗುಳತೆ ದೂರದಲ್ಲಿ ಈ ಒಳಚರಂಡಿಯಲ್ಲಿ ಕಲುಷಿತ ನೀರು ದರ್ಪಣ ತೀರ್ಥ ನದಿಗೆ ಸೇರುತ್ತಿದೆ, ಸಂಬಂಧಪಟ್ಟ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗಮನ ಕೊಡುತ್ತಿಲ್ಲ ಯಾಕೆ?ಎಂದು ಸಾರ್ವಜನಿಕರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಆದಷ್ಟು ಬೇಗ ಒಳ್ಳೆ ಚರಂಡಿ ಕಲುಷಿತ ನೀರು ನದಿಗೆಸೇರಿ ಅದೇ ನೀರನ್ನು ಕುಡಿದು ಸಾಂಕ್ರಾಮಿಕ ಕಾಯಿಲೆಗಳು ಹರಡದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನಹರಿಸಿ .ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಈ ಕಲುಷಿತ ರಾಸಾಯನಿಕ ಯುಕ್ತ ಕೊಳಚೆ ನೀರು ದರ್ಪಣ ತೀರ್ಥ ಕುಮಾರಧಾರ ನದಿಗೆ ಸೇರದಂತೆ ತಡೆಯಬೇಕು.
ಜನಸಾಮಾನ್ಯರನ್ನು 
ನದಿಯಲ್ಲಿ ಜೀವಿಸುವ ಜಲಚರಗಳನ್ನು , ಕುಮಾರಧಾರ ನದಿಯಲ್ಲಿನ್ನ ದೇವರ ಮೀನುಗಳನ್ನು ರಕ್ಷಿಸಿ,ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಿ ಎಂದು ಅಧಿಕಾರಿಗಳಲ್ಲಿ ಮಾಧ್ಯಮದ ಮೂಲಕ ಮನವಿ ಮಾಡುತ್ತೇವೆ.

Post a Comment

Previous Post Next Post