ಸುಬ್ರಹ್ಮಣ್ಯ ಮಾ.1: ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜು, ಪುತ್ತೂರು ರೋಟರಿ ಕ್ಯಾಂಪುಕೋ ಬ್ಲಡ್ ಬ್ಯಾಂಕ್ ಸೆಂಟರ್, ಕೆ ಎಸ್ ಎಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಹಿರಿಯ ವಿದ್ಯಾರ್ಥಿ ಸಂಘ ,ರೋವರ್ಸ್ ರೆಂಜರ್ಸ್ ಘಟಕ ,ಆಂತರಿಕ ಗುಣಮಟ್ಟ ವಿಭಾಗ
ಇವುಗಳ ಜಂಟಿ ಸಹಯೋಗದಲ್ಲಿ ರಕ್ತದಾನ ಶಿಬಿರವು ಮಾರ್ಚ್ 4ರಂದು ಕಾಲೇಜಿನಲ್ಲಿ ನಡೆಯಲಿರುವುದಾಗಿ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಡಾ.ದಿನೇಶ್ ಕೆ ತಿಳಿಸಿರುತ್ತಾರೆ. ಶಿಬಿರವನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾ ಅಧಿಕಾರಿ ಹಾಗೂ ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ಅರವಿಂದ.ಎ.ಎಸ್. ಉದ್ಘಾಟಿಸಲಿರುವವರು. ಸಾರ್ವಜನಿಕರು ಕೂಡ ಆ ದಿನ ಬಂದು ರಕ್ತದಾನ ಮಾಡಬಹುದೆಂದು ತಿಳಿಸಿರುತ್ತಾರೆ.
Post a Comment