ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ, ಸಂಶೋಧನಾ ಸಮಿತಿಯ ವತಿಯಿಂದ ಸಂಶೋಧನಾ ಪ್ರಬಂಧ ಬರೆಯುವ ಕುರಿತು ಕಾರ್ಯಾಗಾರ.


ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ, ಆಂತರಿಕ ಗುಣಮಟ್ಟ ಭರವಸಾಕೋಶದ ಸಹಯೋಗದೊಂದಿಗೆ ಸಂಶೋಧನಾ ಸಮಿತಿಯ ವತಿಯಿಂದ 17.3.2024ರಂದು ಸಂಶೋಧನಾ ಪ್ರಬಂಧ ಬರವಣಿಗೆ ಎಂಬ ವಿಷಯದ ಕುರಿತು ಕಾರ್ಯಗಾರವನ್ನು ಏರ್ಪಡಿಸಲಾಯಿತು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯು ತ್ತ ಕಾಲೇಜಿನ ಐತಿಹಾಸ ವಿಭಾಗದ ಮುಖ್ಯಸ್ಥರು ಹಾಗೂ ಸಹ ಪ್ರಾಧ್ಯಾಪಕರಾದ ಡಾ.ಸನ್ಮತಿ ಕುಮಾರ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ದಿನೇಶ ಪಿ .ಟಿ, ಸಂಶೋಧನಾ ಸಮಿತಿಯ ಸಂಯೋಜಕರಾದ ಡಾ. ಪ್ರಸಾದ ಎನ್ ಹಾಗೂ ಸದಸ್ಯರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಯಕ್ಷ ಪಿ ಎಸ್ ಸ್ವಾಗತಿಸಿ, ರಕ್ಷಾ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿ, ಹಸ್ತ ವಿ ಕೆ .ಎಸ್ ಧನ್ಯವಾದ ಸಮರ್ಪಿಸಿ, ಅಂಕಿತ ಕಾರ್ಯಕ್ರಮ ನಿರೂಪಿಸಿದರು. ಒಟ್ಟು 102 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Post a Comment

أحدث أقدم