ಐನೆಕಿದು ಗುಂಡಡ್ಕ ಬಳಿ ಮೀನು ಹಿಡಿಯಲು ತೆರಳಿದಾತ ಮುಳುಗಿ ಸಾವು.

ಐನೆಕಿದು ಗುಂಡಡ್ಕ ಬಳಿ ಮೀನು ಹಿಡಿಯಲು ತೆರಳಿದಾತ ಮುಳುಗಿ ಸಾವು.
ಐನೆಕಿದು ಗ್ರಾಮದ ಗುಂಡಡ್ಕ ನಿವಾಸಿ ಜಗದೀಶ ಎಂಬವರು ಮೀನು ಹಿಡಿಯಲು ತೆರಳಿದ್ದಾಗ ನೀರಲ್ಲಿ ಮುಳುಗಿ ನಿಧನರಾದ ಘಟನೆ ಮಾ. 16 ಸಂಜೆ ವರದಿಯಾಗಿದೆ. ಅವರಿಗೆ 45 ವರ್ಷ ವಯಸ್ಸಾಗಿತ್ತು.

 ಸಂಜೆ ವೇಳೆ ಗುಂಡಡ್ಕ ಬಳಿ ಮೀನು ಹಿಡಿಯಲು ಹೊಳೆಗೆ ತೆರಳಿದ್ದಾಗ ನೀರಲ್ಲಿ ಮುಳುಗಿದ್ದಾರೆ. ಅವರೊಂದಿಗೆ ಇದ್ದ ಮಕ್ಕಳು ಮನೆಯವರಿಗೆ ಬಂದು ನೀರಲ್ಲಿ ಮುಳುಗಿದ ವಿಚಾರ ತಿಳಿಸಿದ್ದಾರೆ. ಬಳಿಕ ಸ್ಥಳೀಯರು ತೆರಳಿ ನೀರಲ್ಲಿ ಮುಳುಗಿ ಹುಡುಕಾಡಿ ಮೃತ ದೇಹವನ್ನು ಮೇಲಕೆತ್ತಿರುವುದಾಗಿ ತಿಳಿದು ಬಂದಿದೆ. ಮೃತರು ಪತ್ನಿ ಲೀಲಾವತಿ,ಮಕ್ಕಳಾದ ಎಳನೇ ತರಗತಿ ಓದುತಿರುವ ಗೌತಮಿ, 5 ನೇ ತರಗತಿ ಓದುತ್ತಿರುವ ಸ್ವಸ್ತಿಕ್ , ತಾಯಿ ಸೀತಮ್ಮ ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.

Post a Comment

أحدث أقدم