( ಮಾ.18) ಸುಬ್ರಹ್ಮಣ್ಯ ರೈಲು ನಿಲ್ದಾಣ( ನೆಟ್ಟಣ)ಕ್ಕೆ ನೈರುತ್ಯ ರೈಲ್ವೆ.ಜಿ.ಎಂ. ಬೇಟಿ.

ಸುಬ್ರಹ್ಮಣ್ಯ ಮಾ.17: ಸುಬ್ರಹ್ಮಣ್ಯ ರೋಡ್ ನೆಟ್ಟಣ ರೈಲ್ವೆ ನಿಲ್ದಾಣಕ್ಕೆ ನೈರುತ್ಯ ರೈಲ್ವೆ ಜನರಲ್ ಮ್ಯಾನೇಜರ್ ಮುಕುಲ್ ಶರಣ್ ಮಾತೂರ್ ಮಂಗಳವಾರ ನಿಲ್ದಾಣದ ತಪಾಸಣೆಗಾಗಿ ಭೇಟಿ ನೀಡಲಿದ್ದಾರೆ. ಅಮೃತ ಭಾರತ್ ಯೋಜನೆ ಅಡಿಯಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಸುಬ್ರಹ್ಮಣ್ಯ ರೋಡ್ ರೈಲ್ವೆ ನಿಲ್ದಾಣದ ಅಭಿವೃದ್ಧಿಗಾಗಿ ೨೫ ಕೋಟಿ ರೂ ಮಂಜೂರಾಗಿರುತ್ತದೆ ಇದರಲ್ಲಿ ಪ್ಲ್ಯಾಟ್ ಫಾರ್ಮ್ ಮೇಲ್ಚಾವಣಿ ಲಿಪ್ಟ್ ವ್ಯವಸ್ಥೆ ಪಾರ್ಕಿಂಗ್ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆಗಳು ಸೇರಿದೆ ಆದರೆ ಕಳೆದ ಮೂರು ವರ್ಷಗಳಿಂದ ಕಾಮಗಾರಿಗಳು ಆಮೆ ಗತಿಯಲ್ಲಿ ಸಾಗುತ್ತಾ ಬಂದಿದ್ದು ರೈಲ್ವೆ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗಿದೆ . ಆ ನಿಟ್ಟಿನಲ್ಲಿ ಮಂಗಳೂರು ಲೋಕಸಭಾ ಸದಸ್ಯ ಬ್ರಿಜೇಶ್ ಚೌಟ ರವರ ಗಮನಕ್ಕೆ ತಂದಿದ್ದು, ಸಂಸದರು ರೈಲ್ವೇ ಜನರಲ್ ಮ್ಯಾನೇಜರ್ರವರನ್ನ ಖುದ್ದಾಗಿ ಭೇಟಿ ಮಾಡಿ ವಿವರಗಳನ್ನು ತಿಳಿಸಿರುತ್ತಾರೆ. ಆದ್ದರಿಂದ ನೈರುತ್ಯ ರೈಲ್ವೆ ಜನರಲ್ ಮ್ಯಾನೇಜರ್ ಅವರು ಖುದ್ದಾಗಿ ತಪಾಸಣೆಗೆ ಮಂಗಳವಾರ ಸುಬ್ರಹ್ಮಣ್ಯ ರೋಡ್ ರೈಲ್ವೆ ನಿಲ್ದಾಣಕ್ಕೆ ಬರಲಿದ್ದಾರೆ ,ಎಂದು ಸುಬ್ರಹ್ಮಣ್ಯ ರೋಡ್ ರೈಲ್ವೆ ಬಳಕೆದಾರರ ಅಧ್ಯಕ್ಷ ಪ್ರಸಾದ್ ನೆಟ್ಟಣ ತಿಳಿಸಿರುತ್ತಾರೆ.

Post a Comment

أحدث أقدم