ಡಿಕೆಶಿಯ ಆ ಒಂದು ಮಾತಿನಿಂದ ಕಾಂಗ್ರೆಸ್ ಪಡಶಾಲೆಯಲ್ಲಿ ಶುರುವಾಗಿದೆ ಗುಸುಗುಸು?
ಕಾರ್ಕಳ: ಕಾರ್ಕಳ ವಿಧಾನ ಸಭಾ ಕ್ಷೇತ್ರಕ್ಕೆ ಚೊಚ್ಚಲ ಭೇಟಿ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ ಚಾಣಾಕ್ಷತನ ಮೆರೆದ ಡಿಕೆಶಿ ಅವರ ಆ ಒಂದು ಹೇಳಿಕೆ ಕಾಂಗ್ರೆಸ್ ಪಡಶಾಲೆಯಲ್ಲಿ ಇದೀಗ ಗುಸುಗುಸು ಸುದ್ದಿ ಮಾಡುತ್ತಿದೆ.
ಡಿಕೆಶಿ ಭಾಷಣದಲ್ಲಿ ಮುಂದಿನ ಬಾರಿಯೂ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುತ್ತದೆ. ಕಾರ್ಕಳ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ವಿಧಾನ ಸೌಧ ಪ್ರವೇಶಿಸುತ್ತಾರೆ ಎಂದು ಹೇಳುವ ವೇಳೆ ಹಿಂದಿನ ಚುನಾವಣೆಯಲ್ಲಿ ಸ್ಪರ್ಧಿಸಿದ ಪರಾಜಿತ ಅಭ್ಯರ್ಥಿ ಹೆಸರನ್ನು ಎಲ್ಲಿಯೂ ಹೇಳದೆ ಇರುವುದು ಮುಂದಿನ ಬಾರಿ ಅಭ್ಯರ್ಥಿ ಬದಲಾವಣೆ ಸುಳಿವಿದು ಎನ್ನುವ ಚರ್ಚೆ ಪಕ್ಷದೊಳಗೆ ಆರಂಭವಾಗಿದೆ. ಮುಂದಿನ ಇಲೆಕ್ಷನ್ ಸಂದರ್ಭ ಅಭ್ಯರ್ಥಿ ಬದಲಾಗುವ ಮುನ್ಸೂಚನೆಯನ್ನು ಡಿಕೆಶಿ ನೀಡಿದರೆ ಎನ್ನುವ ಮಾತುಗಳು ಕಾಂಗ್ರೆಸ್ ಪಡಶಾಲೆಯಿಂದ ಕೇಳಿಬರಲಾರಂಭಿಸಿದೆ.
ಡಿಕೆಶಿಯವರು ಭಾಷಣದಲ್ಲಿ ಈ ಹಿಂದೆ ಸ್ಪರ್ಧಿಸಿ ಪರಾಜಿತಗೊಂಡ ಅಭ್ಯರ್ಥಿಯ ಹೆಸರು ಉಲ್ಲೇಖಿಸಬಹುದು ಎಂದು ನಿರೀಕ್ಷಿ ಇತ್ತು. ಮುಂದಿನ ಬಾರಿಯೂ ಸ್ಪರ್ಧಿಸಿ ವಿಧಾನ ಸಭೆ ಮೆಟ್ಟಿಲು ಏರಲು ತುದಿಕಾಲಿನಲ್ಲಿರುವ ಪರಾಜಿತ ಅಭ್ಯರ್ಥಿ ಕೂಡ ತನ್ನ ಹೆಸರನ್ನು ಡಿಕೆಶಿ ಉಲ್ಲೇಖಿಸಬಹುದು ಎನ್ನುವ ಹಂಬಲದಲ್ಲಿದ್ದರು. ಆದರೆ ಅವರ ಹೆಸರು ಡಿಕೆಶಿ ಹೇಳದೆ ಇರುವುದು ಮತ್ತೆ ಸ್ಪರ್ಧಿಸುವ ಆಕಾಂಕ್ಷೆಗೆ ತಣ್ಣಿರು ಎರಚಿದರೇ ಎನ್ನುವ ಸಂಶಯವನ್ನು ಹುಟ್ಟು ಹಾಕಿದೆ. ಇದರಿಂದಾಗಿ ಮುಂದಿನ ಚುನಾವಣೆ ವೇಳೆ ಅಭ್ಯರ್ಥಿ ಬದಲಿಸುವ ಚಿಂತನೆ ಡಿಕೆಶಿ ಮನಸಿನೊಳಗೆ ಇರಬಹುದೇನೊ ಎನ್ನುವ ಮಾತುಗಳು ಕೇಳಿ ಬರಲಾರಂಬಿಸಿದೆ.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಲ್ಪ ಮತದ ಅಂತರದಿಂದ ಸೋಲು ಅನುಭವಿಸಿದ್ದರು. ಅದಾದ ನಂತರದಲ್ಲಿ ಪರಶುರಾಮ ಥೀಂ ಪಾರ್ಕ್ ವಿಚಾರವನ್ನು ಕೈಗೆತ್ತಿಕೊಂಡಿತ್ತು. ಆರಂಭದಲ್ಲಿ ಇದು ಕಾಂಗ್ರೆಸ್ಸಿಗೆ ಲಾಭ ತಂದುಕೊಟ್ಟಿತ್ತಾದರೂ ನಿಧಾನಕ್ಕೆ ಅದು ತಿರುಗುಬಾಣವಾಗಿ ಪಕ್ಷಕ್ಕೆ ನಷ್ಟ ತಂದೊಡ್ಡುತ್ತಿದೆ. ಇದೇ ವಿಚಾರದಲ್ಲಿ ಪಕ್ಷದೊಳಗೆ ಅಸಮಧಾನಗಳು ಇವೆ. ಈ ಎಲ್ಲದರ ನಡುವೆ ಪಕ್ಷದ ಬಲ ನಿಧಾನಕ್ಕೆ ಕುಂದುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ಇದೇ ವೇಳೆ ಡಿಕೆಶಿ ಅವರನ್ನು ಕಾರ್ಕಳಕ್ಕೆ ಕರೆಸಿ ಶಕ್ತಿ ಪ್ರದರ್ಶನ ನಡೆಸುವ ನಿರೀಕ್ಷೆಯಲ್ಲಿದ್ದ ಇಲ್ಲಿನ ಕಾಂಗ್ರೆಸ್ ನಾಯಕರಿಗೆ ಕೊಂಚ ಮಟ್ಟಿಗೆ ನಿರಾಶೆಯಾಗಿದೆ ಎಂದೆ ಹೇಳಬಹುದು.
ಇದಕ್ಕೆ ಇದುವೂ ಒಂದು ಕಾರಣವಾಗಬಹುದು. ಮೊದಲ ಬಾರಿಗೆ ಕಾರ್ಕಳ ಕ್ಷೇತ್ರಕ್ಕೆ ಡಿಕೆಶಿಯವರನ್ನು ಕರೆತರುವ ಮೊದಲು ಡಿಕೆಸಿ ಉಪಸ್ಥಿತಿಯ ಕಾರ್ಯಕರ್ತರ ಪದಗ್ರಹಣ ಸಮಾರಂಭದಲ್ಲಿ 15 ಸಾವಿರ ಮಂದಿ ಸೇರುವುದಾಗಿ ಕಾಂಗ್ರೆಸ್ಸಿನ ನಾಯಕರು ಹೇಳಿಕೊಂಡಿದ್ದರು. ಆದರೆ ಪದಗ್ರಹಣ ಸಭೆಯಲ್ಲಿ 2 ಸಾವಿರ ಆಸುಪಾಸಿನಲ್ಲಿ ಕಾರ್ಯಕರ್ತರು ಸೇರಿದ್ದು ಸ್ವತ; ಕಾಂಗ್ರೆಸ್ ನಾಯಕರಿಗೆ ಮುಜುಗರ ತಂದಿದಲ್ಲದೆ ಡಿಕೆಶಿಯವರಿಗೂ ಅಸಮಧಾನ ನೀಡಿದೆ ಎಂದು ಹೇಳಲಾಗುತ್ತಿದೆ. ಬಿಜೆಪಿ ಕೂಡ ಇದನ್ನು ಟೀಕಿಸಿ ಅಸ್ತ್ರವನ್ನಾಗಿ ಬಳಸಿಕೊಂಡು ಹೇಳಿಕೆ ನೀಡಿದೆ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸೇರಿಸುವ ಉತ್ಸಾಹದಿಂದ ಡಿಕೆಶಿ ಅವರನ್ನು ಕರೆಸುವ ನಾಯಕರ ಪ್ರಯತ್ನಕ್ಕೆ ತಕ್ಕಮಟ್ಟಿಗೆ ಹಿನ್ನಡೆಯಾಗಿದೆ. ನಿರೀಕ್ಷಿತ ಜನಸ್ತೋಮ ಸೇರದೆ ಇರುವುದು ಕಾಂಗ್ರೆಸ್ ಬಲ ಕಳೆದುಕೊಳ್ಳುತ್ತಿರುವ ಮುನ್ಸೂಚನೆಯನ್ನು ನೀಡಿದೆ.
ಒಟ್ಟಿನಲ್ಲಿ ಕ್ಷೇತ್ರದ ಕಾಂಗ್ರೆಸ್ ಒಳಗೆ ಎಲ್ಲವೂ ಸರಿಯಾಗಿಲ್ಲ ಎನ್ನುವುದು ಸ್ಪಷ್ಟ.ವರ್ಚಸ್ಸು ಕಡಿಮೆಯಾಗಿದೆ.ಇದನ್ನು ಕಾಂಗ್ರೆಸ್ ನ ಕೆಲ ಮುಖಂಡರೇ ಬಹಿರಂಗವಾಗಿ ಹೇಳುತ್ತಿದ್ದಾರೆ
إرسال تعليق